newsics.com
ದಿನಗಳಲ್ಲಿ ಗೋಲಿ ಸೋಡಾ ಭಾರತದಲ್ಲಿ ಭಾರೀ ಫೇಮಸ್ಸು. ಹಿಂದಿನ ತಲೆಮಾರಿನ ಎಲ್ಲರಿಗೂ ಈ ಗೋಲಿ ಸೋಡಾ ಅಂದ್ರೆ ಅಚ್ಚುಮೆಚ್ಚು. ಆದರೆ ಕಾಲಕ್ರಮೇಣ ಗೋಲಿ ಸೋಡಾ ಜಾಗದಲ್ಲಿ ವಿದೇಶಿ ವಸ್ತುಗಳ ವ್ಯಾಮೋಹ ಹೆಚ್ಚಿರುವ ಭಾರತೀಯರು ಸಾಫ್ಟ್ ಡ್ರಿಂಕ್‌ಗಳಿಗೆ ಒಲವು ತೋರಿದ್ದಾರೆ. ಆದರೆ ವಿದೇಶಿಗರು ಗೋಲಿ ಸೋಡಾ ಬಯಸುತ್ತಿದ್ದಾರೆ. ಈ ಗೋಲಿ ಸೋಡಾಕ್ಕೆ ಅಮೆರಿಕ, ಯೂರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
ಭಾರತದ ಗೋಲಿ ಸೋಡಾಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ಗೋಲಿ ಸೋಡಾಗಳ ಉತ್ಪಾದನೆ ಹೆಚ್ಚಾಗುತ್ತಿದೆ. ವಿದೇಶಗಳಲ್ಲಿ ಗೋಲಿ ಸೋಡಾ ಎಲ್ಲಾ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಸೇರಿದಂತೆ ಸಣ್ಣ ಸಣ್ಣ ಶಾಪ್‌ಗಳಲ್ಲೂ ಲಭ್ಯವಿದೆ.
ವಿದೇಶದಲ್ಲಿ ಗೋಲಿ ಪಾಪ್ ಸೋಡಾ ಎಂದು ಮರುನಾಮಕರಣ ಮಾಡಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಲುಲು ಮಾರ್ಕೆಟ್ ಮೂಲಕ ಗೋಲಿ ಸೋಡಾ ಸರಬರಾಜಾಗುತ್ತಿದೆ. ಇನ್ನು ಯುಕೆ, ಅಮೆರಿಕ ಸೇರಿದಂತೆ ಯೂರೋಪ್ ರಾಷ್ಟ್ರಗಳಿಗೂ ಇದೀಗ ಗೋಲಿ ಸೋಡಾ ಅತ್ಯಧಿಕ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ. ಅದರಲ್ಲೂ ಜಿಂಜರ್ ಫ್ಲೇವರ್ ಸೋಡಾಗೆ ಭಾರಿ ಬೇಡಿಕೆ ಇದೆ. ಗೋಲಿ ಪಾಪ್ ಸೋಡಾದಲ್ಲಿ ಹಲವು ಫ್ಲೇವರ್‌ಗಳಿವೆ. ಅಂತೂ ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಇರುವ ಗೋಲಿ ಸೋಡಾ ವಿದೇಶದಲ್ಲೂ ಭಾರೀ ಸದ್ದು ಮಾಡುತ್ತಿದೆ.