newsics.com
ಬೆಂಗಳೂರು: ಮೈ ಮರೆತು ಕಿಸ್ಸಿಂಗ್-ರೊಮ್ಯಾನ್ಸ್ ಮಾಡುವ ಕೆಲ ಪ್ರೇಮಿಗಳಿಗೆ ಕ್ಯಾಬ್ ಡ್ರೈವರ್ ಎಚ್ಚರಿಕೆ ಫಲಕದ ಫೋಟೋ ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬೆಂಗಳೂರಿನ ಕ್ಯಾಬ್ ಡ್ರೈವರ್ ತನ್ನ ಕ್ಯಾಬ್ನಲ್ಲಿ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂಬ ಎಚ್ಚರಿಕೆ ಫಲಕವನ್ನು ಕ್ಯಾಬ್ನಲ್ಲಿ ನೇತು ಹಾಕುವ ಮೂಲಕ ತನ್ನ ಕ್ಯಾಬ್ನಲ್ಲಿ ಪ್ರಯಾಣಿಸುವ ಪ್ರೇಮಿಗಳು ಮಿತಿಮೀರಿ ವರ್ತಿಸಬಾರದು ಎಂದು ವಾರ್ನಿಂಗ್ ನೀಡಿದ್ದಾನೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು dancing_pappu ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಕ್ಯಾಬ್ನಲ್ಲಿದ್ದ ಈ ಎಚ್ಚರಿಕೆ ಫಲಕದ ಫೋಟೋವನ್ನು ಹಂಚಿಕೊಂಡು, “ಇಂದು ಬೆಂಗಳೂರಿನ ಕ್ಯಾಬ್ ಒಂದರಲ್ಲಿ ಇದನ್ನು ನೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.