ವರ್ಜೀನಿಯಾ: ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಜರಾತ್ ಮೂಲದ ತಂದೆ-ಮಗಳು ಮೃತಪಟ್ಟಿರುವ ಘಟನೆ ಅಮೆರಿಕದ ವರ್ಜೀನಿಯಾದಲ್ಲಿ ನಡೆದಿದೆ. ಮೃತರನ್ನು ಪ್ರದೀಪ್‌ಭಾಯ್ ಪಟೇಲ್ (56) ಮತ್ತು ಅವರ 24 ವರ್ಷದ ಮಗಳು ಉರ್ವಿ ಪಟೇಲ್ ಎಂದು ಗುರುತಿಸಲಾಗಿದೆ.
ಇವರು ಗುಜರಾತ್‌ನ ಮೆಹ್ಸಾನಾದ ಕನೋಡಾ ಗ್ರಾಮದವರಾಗಿದ್ದು, ಪಾಟಿದಾರ್ ಕುಟುಂಬಕ್ಕೆ ಸೇರಿದವರು.