ಮಧ್ಯಪ್ರದೇಶದ: ಇನ್‌ಸ್ಟಾಗ್ರಾಂ ಲೈವ್ ಬಂದು ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಹೇಳಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವಪ್ರಕಾಶ್ ತ್ರಿಪಾಠಿ ಎಂದು ತಿಳಿದು ಬಂದಿದೆ.
ಶಿವಪ್ರಕಾಶ್ ಅವರು 2 ವರ್ಷದ ಹಿಂದೆ ಪ್ರಿಯಾ ಶರ್ಮಾ ಎಂಬುವವರನ್ನು ಮದುವೆಯಾಗಿದ್ದರು. ಪತ್ನಿಗೆ
ಮತ್ತೂಬ್ಬರ ಜೊತೆ ಸಂಬಂಧವಿದೆ ಎಂಬುದು ಪತಿಗೆ ತಿಳಿದಿತ್ತು. ಅಲ್ಲದೇ ಪತ್ನಿ ತವರು ಮನೆಗೆ ಹೋಗಿದ್ದ ಕಾರಣ ಇಬ್ಬರು ಸೇರಿ ತನ್ನ ವೈವಾಹಿಕ ಜೀವನವನ್ನು ಹಾಳು ಮಾಡಿದರು ಎಂದು ಆರೋಪಿಸಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪೋಲೀಸರು ಬಂಧಿಸಿದ್ದಾರೆ.