newsics.com
ಬೆಂಗಳೂರು: ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಬಂದ್ ಹಿನ್ನೆಲೆ ಬೆಂಗಳೂರಲ್ಲಿ ಖಾಸಗಿ ಬಸ್, ವಾಹನಗಳು, ಓಲಾ ಉಬರ್ ಹೋರಾಟ ಸ್ಥಗಿತವಾಗಿದ್ದು, ಕೆಎಸ್‌ಆರ್ಟಿಸಿ ಬಿಎಂಟಿಸಿ ಸಂಚಾರ ಇರುತ್ತದೆ ಆದರೂ ಕೂಡ ಅದರಲ್ಲೂ ಇನ್ನು ಗೊಂದಲ ಇದೆ. ಮಧ್ಯಾಹ್ನದವರೆಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗಳು ಕ್ಯಾನ್ಸಲ್ ಆಗಿದ್ದು, ಟೌನ್ ಹಾಲಿನಿಂದ ಬೆಳಿಗ್ಗೆ 6 ಗಂಟೆಯಿಂದ ಬೃಹತ್ ರ‍್ಯಾಲಿ ನಡೆಯಲಿದೆ. ಹಾಗಾಗಿ ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.
ಏನಿರಲ್ಲ?
ಬಂದ್ ವೇಳೆಯಲ್ಲಿ ಹೋಟೆಲ್ ಕ್ಲೋಸ್
ಸಿನಿಮಾ ಥಿಯೇಟರ್ ಬಂದ್
ಸರ್ಕಾರಿ ಕಚೇರಿಗಳು ತೆರೆದಿರೋದು ದೌಟ್
ಸಾರಿಗೆ ಬಸ್ ಸಂಚಾರ ಇರಲ್ಲ.
ಓಲಾ, ಉಬರ್, ಆಟೋ, ಲಾರಿ ಸಂಚಾರ ಬಹುತೇಕ ಸ್ಥಗಿತ.
ಮಾಲ್ ಗಳು ಕ್ಲೋಸ್
ಏನಿರುತ್ತೆ.?
ಮೆಡಿಕಲ್ ಶಾಪ್ ಓಪನ್
ಹಾಲಿನ ಬೂತ್ ಗಳು ತೆರೆದಿರುತ್ತೆ
ಹಣ್ಣು-ತರಕಾರಿ ಅಂಗಡಿ ಓಪನ್
ಅಗತ್ಯ ವಸ್ತುಗಳ ಪೂರೈಕೆ ಸೇವೆ ಎಂದಿನಂತೆ ಇರಲಿದೆ
ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗೋದು ಕಡಿಮೆ