newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಕೃಷ್ಣ ಪಕ್ಷ ಅಷ್ಟಮಿ
22-03-2025, ಶನಿವಾರ
# ಕಾಲಾಷ್ಟಮಿ
# ವಿಶ್ವ ಜಲ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 22/03/2025
ತಿಂಗಳು – ಮಾರ್ಚ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ಅಷ್ಟಮಿ 29:22:50*
ಪಕ್ಷ – ಕೃಷ್ಣ
ನಕ್ಷತ್ರ – ಮೂಲ 27:22:33*
ಯೋಗ – ವ್ಯತಾಪತಾ 18:35:14
ಕರಣ – ಬಾಳವ 16:58:21
ಕರಣ – ಕೌಳವ 29:22:50*
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಚೈತ್ರ
ಚಂದ್ರ ರಾಶಿ – ಧನು
ಸೂರ್ಯ ರಾಶಿ – ಮೀನ
ಋತು – ಶಿಶಿರ
ಸೂರ್ಯೋದಯ 06:23:32
ಸೂರ್ಯಾಸ್ತ 18:29:25
ಹಗಲಿನ ಅವಧಿ 12:05:53
ರಾತ್ರಿಯ ಅವಧಿ 11:53:26
ಚಂದ್ರಾಸ್ತ 11:47:50
ಚಂದ್ರೋದಯ 25:15:15*
ರಾಹು ಕಾಲ 09:25 – 10:56 ಅಶುಭ
ಯಮಘಂಡ ಕಾಲ 13:57 – 15:28 ಅಶುಭ
ಗುಳಿಕ ಕಾಲ 06:24 – 07:54
ಅಭಿಜಿತ್ 12:02 – 12:51 ಶುಭ
ದುರ್ಮುಹೂರ್ತ 08:00 – 08:49 ಅಶುಭ
—
ಇಂದಿನ ಮಾತು
ಬದುಕು ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಎನ್ನುವುದು ಮುಖ್ಯ.
—
ಇಂದಿನ ಸುಭಾಷಿತ
ಯತ್ಪ್ರಾತಃ ಸಂಸ್ಕೃತಂ ಭೋಜ್ಯಂ
ಸಾಯಂ ತಚ್ಚ ವಿನಶ್ಯತಿ |
ತದನ್ನರಸಸಂಪುಷ್ಟೇ
ಕಾಯೇ ಕಾ ನಾಮ ನಿತ್ಯತಾ ।।
(ಗರುಡ ಪುರಾಣ)
ಬೆಳಗ್ಗೆ ಅಡುಗೆ ಮಾಡಿದ ಆಹಾರವು ಸಂಜೆಗೆ ಹಳಸಿಹೋಗುತ್ತದೆ. ಹೀಗಿರುವಾಗ ಅದೇ ಅನ್ನರಸದಿಂದ ಬೆಳೆದ ದೇಹವು ಹೇಗೆ ನಿತ್ಯವಾದೀತು?
—
ಇಂದಿನ ಪದಾರ್ಥ
ಅಪರಾಜಿತ = Unconquered,
ಅಪರಾಧರತಿ = One who takes plensuure in crime
—
ಇಂದಿನ ಓದು
ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || 8 ||
64) ಈಶಾನಃ
ಈಶ ಎಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು. ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ.
65) ಪ್ರಾಣದಃ
ಪ್ರಾಣ+ದಃ=ಪ್ರಾಣದಃ. ಇಲ್ಲಿ ದಃ ಅನ್ನುವ ಪದಕ್ಕೆ “ಕೊಡುವವನು” ಮತ್ತು “ಕಸಿದುಕೊಳ್ಳುವವನು” ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ. ಪ್ರಾಣದಃ ಅಂದರೆ ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು , ಬದುಕಿಗೆ ಬೇಕಾದ ಕಲೆಯನ್ನು ಕೊಡುವವನು; ಕೊನೆಗೆ ಬೌದ್ಧಿಕ ಶರೀರವನ್ನು ಕಸಿದುಕೊಂಡು, ಮುಕ್ತಿಯನ್ನು ದಯಪಾಲಿಸುವವನು ಪ್ರಾಣದಃ.
***
Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 22-03-2025, ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?