newsics.com
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ತಗ್ಲಾಕ್ಕೊಂಡಿದ್ದು, ಈ ಬಿಸ್ಕೆಟ್ ಬ್ಯೂಟಿ ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇನ್ನು ಇದೇ ಪ್ರಕರಣ ಎರಡನೇ ಆರೋಪಿಯಾಗಿರುವ ತರುಣ್ ರಾಜು ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಬುಧವಾರ ವಜಾಗೊಳಿಸಿದೆ.
ವಿಶ್ವನಾಥ್ ಸಿ ಗೌಡರ್ರಿಂದ ತರುಣ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಲಾಗಿದೆ.
ಇನ್ನು ಗೋಲ್ಡ್ ಸ್ಮಗ್ಲಿಂಗ್ನ 2ನೇ ಆರೋಪಿ ತರುಣ್ ರಾಜುಗೆ ಇತ್ತೀಚೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಡಿಆರ್ಐ ಕಸ್ಟಡಿ ಅವಧಿ ಮುಗಿದಿದ್ದರಿಂದ ಇತ್ತೀಚೆಗೆ ಜಡ್ಜ್ ಮನೆಗೆ ಹಾಜರುಪಡಿಸಿಲಾಗಿತ್ತು. ಡಿಆರ್ಐ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಲಾಗಿತ್ತು. ಇದೇ ವೇಳೆ ತರುಣ್ ರಾಜು ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ DRIಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ DRI ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದರು.
ಅಮೇರಿಕಾದಲ್ಲಿ ಹುಟ್ಟಿ ಬೆಳೆದು ಭಾರತಕ್ಕೆ ಬಂದಿದ್ದ ತರುಣ್ ರಾಜು, ಸಾವಿರಾರು ಕೋಟಿಗೆ ಬಾಳುವ ಫ್ಯಾಮಿಲಿಯವನು. ಕಾಲೇಜು ಸಮಯದಿಂದ ರನ್ಯಾ ಜತೆಗೆ ಗೆಳೆತನವೂ ಇತ್ತು. ಆದರೆ 2017 ನಂತರ ರನ್ಯಾಗೆ ಅಷ್ಟೇನೂ ಸಿನಿಮಾಗಳು ಸಿಗಲಿಲ್ಲ. ಹೀಗಾಗಿ ಬಿಜಿನೆಸ್ ಪ್ಲ್ಯಾನ್ ಮಾಡಿ ದುಬೈಗೆ ಇಬ್ಬರೂ ಓಡಾಡುತ್ತಿದ್ದರು. 2023ರ ನಂತರ ಗೋಲ್ಡ್ ಸ್ಮಗ್ಲಿಂಗ್ ಶುರು ಮಾಡಿರುವ ಬಗ್ಗೆ ಮಾಹಿಗಳು ಬಹಿರಂಗವಾಗಿವೆ.
ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಆರೋಪಿಗಳಿಗೆ ನಡುಕು ಶುರುವಾಗಿದೆ. ಹವಾಲ ಹಣ ವರ್ಗಾವಣೆ, ಅಕ್ರಮ ಹಣ ವರ್ಗಾವಣೆ, ಚಿನ್ನ ಮತ್ತು 12 ಕೋಟಿ ರೂ ವಹಿವಾಟು ನಡೆದಿರೋದ್ರಿಂದ ಇಡಿ ಎಂಟ್ರಿ ಕೊಟ್ಟಿದೆ. ಜ್ಯುವೆಲ್ಲರಿ ಶಾಪ್‌ಗಳ ಮೂಲ, ಹಣ ಎಲ್ಲಿಂದ ಬಂತು, ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿರುವ ಇಡಿ, ಈಗಾಗಲೇ ತನಿಖೆಗಿಳಿದಿದ್ದಾರೆ.