newsics.com
ತಮ್ಮ ಜೀವಂತ ಮಗಳ ಶ್ರಾದ್ಧ ನೆರವೇರಿಸಿ ಪಿಂಡ ಇಟ್ಟಿದ್ದಾರೆ. ಮಗಳು ಓಡಿ ಹೋಗಿ ಮದುವೆಯಾಗಿದ್ದನ್ನು ಸಹಿಸಲಾಗದೆ ದಂಪತಿ ಅಂತ್ಯಕ್ರಿಯೆ ನೆರವೇರಿಸಿ, ತಮ್ಮ ಮಗಳು ಇನ್ನು ತಮ್ಮ ಪಾಲಿಗಿಲ್ಲ ಎನ್ನುವ ದೃಢ ನಿಶ್ಚಯ ಮಾಡಿದ್ದಾರೆ. ಭವಿಷ್ಯದಲ್ಲಿ ಊರಿನ ಯಾವುದೇ ಹೆಣ್ಣುಮಗಳು ಈ ರೀತಿಯ ಮಾಡದಿರಲಿ ಎನ್ನುವ ಎಚ್ಚರಿಕೆಯಲ್ಲಿ ನೀಡಿದ್ದಾರೆ.
ಪೋಷಕರು ತಮ್ಮ ಮಗಳು ಅಯೋಗ್ಯಳು ಎಂದು ಘೋಷಿಸಿ ತಿಥಿ ಮಾಡಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಚೋಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಪುರ ಗ್ರಾಮ ಪಂಚಾಯತ್‌ನ ಜುವಾಖುರಿ ಅಗ್ನಿಬರಿ ಪ್ರದೇಶದಲ್ಲಿ ನಡೆದಿದೆ.
ಶ್ರದ್ಧಾ ಮಾಡಿದ ಪೋಷಕರ ಮಗಳು ಪ್ರೀತಿಸಿ ಓಡಿಹೋಗಿ ಮದುವೆಯಾದಳು. ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಮನೆಗೆ ಬರಲು ಒಪ್ಪಲಿಲ್ಲ. ಹೀಗಾಗಿ ಆಕೆ ಜೀವಂತವಿದ್ದರೂ ಕೂಡ ಶ್ರಾದ್ಧ ಮಾಡಿದ್ದಾರೆ. ಗ್ರಾಮದ ಅನೇಕ ಜನರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಗಳ ಅಂತ್ಯಕ್ರಿಯೆಯ ಸಮಯದಲ್ಲಿ, ಪೋಷಕರು ಸೇರಿದಂತೆ ಇಡೀ ಕುಟುಂಬವು ಅಳುತ್ತಲೇ ಇತ್ತು.