newsics.com
ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ಆಗಾಗ ವಿದೇಶಕ್ಕೆ ಹೋಗುತ್ತಿದ್ದುದರಿಂದ ಸಂಸಾರದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ.
ರನ್ಯಾ ಪದೇಪದೇ ದುಬೈ ಸೇರಿ ವಿದೇಶಗಳಿಗೆ ಹೋಗುತ್ತಿದ್ದುದರಿಂದ ಪತಿ ಜತಿನ್ ಹುಕ್ಕೇರಿ ಅಸಮಾಧಾನಗೊಂಡು ಡಿಆರ್ಐ ಅಧಿಕಾರಿಗಳಿಗೆ ಚಿನ್ನ ಸಾಗಣೆ ಬಗ್ಗೆ ಮಾಹಿತಿ ನೀಡಿದ್ದರು ಎಂದೂ ಹೇಳಲಾಗುತ್ತಿದೆ.
ವಿದೇಶ ಭೇಟಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಕೂಡ ನಡೆಯುತ್ತಿತ್ತು ಎನ್ನಲಾಗಿದೆ. ರನ್ಯಾ ರಾವ್ ಪದೇ ಪದೆ ವಿದೇಶಕ್ಕೆ ಪ್ರಯಾಣ ಗುಟ್ಟಿನ ಗದ್ದಲ ಜೋರಾಗಿತ್ತು. ರನ್ಯಾ- ಜತಿನ್ ಜಗಳ ವಿಚ್ಛೇದನ ಹಂತಕ್ಕೂ ತಲುಪಿತ್ತೆನ್ನಲಾಗಿದೆ. ಹೀಗಾಗಿ ಪತ್ನಿಯ ಚಿನ್ನ ಕಳ್ಳ ಸಾಗಾಣಿಕೆ ಬಗ್ಗೆ ರನ್ಯಾ ರಾವ್ ಪತಿಯೇ ಡಿಆರ್ಐ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಶಂಕೆ ಕೂಡ ಇದೆ ಎಂದು ಹೇಳಲಾಗಿದೆ.
ಇನ್ನು, ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಸದ್ಯ ನಟಿ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ.
ಬಗೆದಷ್ಟು ರಹಸ್ಯಗಳು ಬಯಲಾಗುತ್ತಲೇ ಇವೆ. ದಿನೇ ದಿನೇ ಗೋಲ್ಡ್ ಕೇಸ್ ಹೊಸ ಹೊಸ ತಿರುವು ಪಡೆದುಕೊಳ್ತಿದೆ.
ರನ್ಯಾ ರಾವ್ ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಡಿಆರ್ಐ ಅಧಿಕಾರಿಗಳು ನಟಿಗೆ ಪ್ರಶ್ನೆಗಳ ಸುರಿಮಳೆಗೈದಿದ್ರು. ಹಲವು ಪ್ರಶ್ನೆಗಳಿಗೆ ಉತ್ತರಿಸಿದ ರನ್ಯಾ, ಅಧಿಕಾರಿಗಳ ಕಣ್ಣೀರು ಹಾಕಿದ್ರಂತೆ. ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಎನ್ನಲಾಗ್ತಿದೆ. ರನ್ಯಾಗೆ ಮಾಜಿ ಹಾಗೂ ಹಾಲಿ ಸಚಿವರ ನಂಟಿದೆ ಎನ್ನುವ ವಿಚಾರ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಪ್ರಭಾವಿ ರಾಜಕಾರಣಿಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳ ಜತೆ ಲಿಂಕ್ ಹೊಂದಿರುವ ರನ್ಯಾ ರಾವ್ಗೆ ಬಂದಿರೋ ಗಿಫ್ಟ್ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ರನ್ಯಾ ರಾವ್ ಅವರಿಗೆ ಕೋಟಿ ಬೆಲೆಬಾಳುವ ವಜ್ರದ ನೆಕ್ಲೆಸ್ ಗಿಫ್ಟ್ ನೀಡಿದ್ದಾರಂತೆ. ಹಲವು ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದು, ರನ್ಯಾ ಅವರ ಬಳಿ ಇರುವ ವಜ್ರ- ಚಿನ್ನದ ಖರೀದಿ ವಹಿವಾಟಿನ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ರಾಮಚಂದ್ರ ರಾವ್ ಮದುವೆಯಲ್ಲಿ ಇದ್ದ ಪೋಟೋಗಳು ಹಾಗೂ ರನ್ಯಾ-ಜತೀನ್ ಮದುವೆ ಆಮಂತ್ರಣ ಪತ್ರಿಕೆಗಳನ್ನೂ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ನವೆಂಬರ್ 27, 2024 ರಂದು ರನ್ಯಾ ಹಾಗೂ ಜತೀನ್ ಅವರು ಬೆಳಗ್ಗೆ 9 ರಿಂದ 9:45ರ ಮುಹೂರ್ತದಲ್ಲಿ ಮದುವೆಯಾಗಿದ್ದರು. ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ನಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿತ್ತು.
ಮದುವೆಯಲ್ಲಿ ರಾಜಕಾರಣಿಗಳು ಸೆಲೆಬ್ರಿಟಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ರು. ಮದುವೆಯಾದ ಮೂರೇ ತಿಂಗಳಿಗೆ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಡಿಆರ್ ಐ ಬಲೆಗೆ ಬಿದ್ದಿದ್ದು, ಇದೀಗ ಜೈಲುವಾಸ ಅನುಭವಿಸುವಂತಾಗಿದೆ.
ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಇತ್ತ ತನಿಖೆ ವೇಳೆ ರನ್ಯಾ ಕುರಿತ ಅನೇಕ ಸೀಕ್ರೆಟ್ ಬಯಲಾಗ್ತಿದೆ. ಈಕೆ ಕೇವಲ TMT ಸ್ಟೀಲ್ ಕಂಪನಿಯನ್ನು ತೆರೆಯಲು ಮಾತ್ರ ಮುಂದಾಗಿರಲಿಲ್ಲ. ಫೋಟೋಗ್ರಫಿ ಹವ್ಯಾಸ ಇತ್ತು ಎಂದು DRI ಮುಂದೆ ರನ್ಯಾ ಹೇಳಿದ್ದಾರೆ. ಹೀಗಾಗಿ ನಟಿ ರನ್ಯಾ ಪೋಟೋಗ್ರಫಿ ಕಂಪನಿಯನ್ನೂ ತೆರೆದಿದ್ದರಂತೆ.
BJP leader Manjula life ends herself ಬಿಜೆಪಿ ನಾಯಕಿ ಮಂಜುಳಾ ಬೆಂಗಳೂರಲ್ಲಿ ಆತ್ಮಹ*ತ್ಯೆ
DYSP Arrest ವಕೀಲೆ ಜೀವಾ ಆತ್ಮಹ*ತ್ಯೆ ಪ್ರಕರಣ: ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ
Gold smuggling case ಚಿನ್ನ ಅಕ್ರಮ ಸಾಗಣೆ: ನಟಿ ರನ್ಯಾ ಮನೆ ಮೇಲೆ ಸಿಬಿಐ ದಾಳಿ