newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ನವಮಿ
08-03-2025, ಶನಿವಾರ
# ಅಂತಾರಾಷ್ಟ್ರೀಯ ಮಹಿಳಾ ದಿನ
# ಶ್ರೀ ರೇಣುಕಾಂಬಾ ದೇವಿ ರಥೋತ್ಸವ, ಚಂದ್ರಗುತ್ತಿ
—
ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 08/03/2025
ತಿಂಗಳು – ಮಾರ್ಚ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ನವಮಿ 08:15:54
ಪಕ್ಷ – ಶುಕ್ಲ
ನಕ್ಷತ್ರ – ಆರ್ದ್ರ 23:27:30
ಯೋಗ – ಆಯುಷ್ಮಾನ್ 16:23:07
ಕರಣ – ಕೌಳವ 08:15:54
ಕರಣ – ತೈತುಲ 19:56:23
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ ಮಿಥುನ
ಸೂರ್ಯ ರಾಶಿ ಕುಂಭ
ಋತು ಶಿಶಿರ
ಸೂರ್ಯೋದಯ 06:32:31
ಸೂರ್ಯಾಸ್ತ 18:28:16
ಹಗಲಿನ ಅವಧಿ 11:55:45
ರಾತ್ರಿಯ ಅವಧಿ 12:03:38
ಚಂದ್ರೋದಯ 13:25:11
ಚಂದ್ರಾಸ್ತ 26:52:15*
ರಾಹು ಕಾಲ 09:31 – 11:01 ಅಶುಭ
ಯಮಘಂಡ ಕಾಲ 13:59 – 15:29 ಅಶುಭ
ಗುಳಿಕ ಕಾಲ 06:33 – 08:02
ಅಭಿಜಿತ್ 12:07 – 12:54 ಶುಭ
ದುರ್ಮುಹೂರ್ತ 08:08 – 08:56 ಅಶುಭ
—
ಇಂದಿನ ಮಾತು
ಮುಂದೊಂದು ದಿನ ನಮ್ಮ ಇಡೀ ಜೀವನ ನಮ್ಮ ಕಣ್ಣೆದುರು ಫ್ಲ್ಯಾಶ್‌ಬ್ಯಾಕ್‌ನಂತೆ ತೆರೆದುಕೊಳ್ಳುತ್ತದೆ. ಆ ದೃಶ್ಯ ವೀಕ್ಷಿಸಲು ಸುಂದರವಾಗಿರುವಂತೆ ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ.
—
ಇಂದಿನ ಸುಭಾಷಿತ
ಯಸ್ಯ ಯಸ್ಯ ಹಿ ಯೋ ಭಾವಃ
ತೇನ ತೇನ ಸಮಾಚರೇತ್ |
ಅನುಪ್ರವಿಶ್ಯ ಮೇಧಾವೀ
ಕ್ಷಿಪ್ರಮಾತ್ಮವಶಂ ನಯೇತ್ ||
(ಪಂಚತಂತ್ರ)
ಬುದ್ಧಿವಂತನಾದವನು ಯಾರು ಯಾರಿಗೆ
ಯಾವ ಯಾವ ಭಾವವೋ ಅದಕ್ಕೆ ತಕ್ಕ ಹಾಗೆ ನಡೆದುಕೊಂಡು ಅವರನ್ನು ತನ್ನ ವಶಪಡಿಸಿಕೊಳ್ಳಬೇಕು.
—
ಇಂದಿನ ಪದಾರ್ಥ
ಅಗ್ನಿಕಾರ್ಯ = Kindling or feeding the sacrificial fire with clarified butter
ಅಗ್ನಿಕಾಷ್ಠ = Wood fit for kindling fire
—
ಇಂದಿನ ಓದು
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||
43) ಧಾತಾ
ಧಾತಾ ಎನ್ನುವ ಭಗವಂತನ ನಾಮ ಅನೇಕ ಅರ್ಥವನ್ನು ಕೊಡುತ್ತದೆ. ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು, ಎಲ್ಲರಿಗೂ ಏನು ಬೇಕೋ ಅದನ್ನು ಕೊಟ್ಟವನು, ಎಲ್ಲಾ ನಾಮವನ್ನು ಧರಿಸಿದವನು ಇತ್ಯಾದಿ. ಇಂತಹ ಭಗವಂತ ಧಾತಾ.
44) ವಿಧಾತಾ
ಸಂಸಾರ ಅವಸ್ಥೆಯಲ್ಲಿ ಮಾತ್ರ ಅಲ್ಲ, ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.
45) ಧಾತುರುತ್ತಮಃ
ಧಾತುಃ ಎಂದರೆ ಚತುರ್ಮುಖ ಬ್ರಹ್ಮನಿಗೂ ಉತ್ತಮನಾಗಿರುವವನು ಎಂದರ್ಥ. ಆತ ತ್ರಿಧಾತು ಅಂದರೆ ಮೂರನ್ನು ಧರಿಸಿರುವವನು. ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು ಧರಿಸಿರುವ, ಎಲ್ಲರಿಗಿಂತ ಶ್ರೇಷ್ಠನಾಗಿರುವ ಸರ್ವಾಧಾರನಾದ ಭಗವಂತ ಧಾತುರುತ್ತಮಃ.
***