newsics.com
ಬೆಂಗಳೂರು: ಚಿನ್ನದ ಕಳ್ಳಸಾಗಣೆ ಸಂಬಂಧ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಮೇಲೂ ಆರೋಪವಿದ್ದು, ಆತನ ಮೇಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರನ್ಯಾ ರಾವ್ ಜೊತೆ ಜತಿನ್ ಹುಕ್ಕೇರಿ ಹಲವು ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇದರ ನಡುವೆ ರನ್ಯಾ ರಾವ್ ಗೆ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು, ಅವರ ಪತಿ ಪ್ರಸಿದ್ಧ ಆರ್ಕಿಟೆಕ್ಚರ್‌ಗಳಲ್ಲಿ ಒಬ್ಬರು ಎನ್ನುವುದು ಗೊತ್ತಾಗಿತ್ತು. ಬೆಂಗಳೂರಿನ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ತಾಜ್ ವೆಸ್ಟ್ ಎಂಡ್‌ನಲ್ಲಿ ಅವರ ವಿವಾಹ ನಡೆದಿತ್ತಾದರೂ ಇದರ ಮಾಹಿತಿ ಎಲ್ಲೂ ಹೊರಬಿದ್ದಿರಲಿಲ್ಲ. ರನ್ಯಾ ರಾವ್ ಬಂಧನವಾದಾಗಲೂ ಅವರ ಪತಿ ಯಾರು ಅನ್ನೋದು ಎಲ್ಲರ ಕುತೂಹಲವಾಗಿತ್ತು. ಈಗ ರನ್ಯಾ ರಾವ್ ಅವರ ಪತಿ ಯಾರು ಎನ್ನುವ ಮಾಹಿತಿ ಸಿಕ್ಕಿದೆ.
ಇತ್ತೀಚೆಗಷ್ಟೇ ಬಹಳ ಅದ್ಧೂರಿಯಾಗಿ ರನ್ಯಾ ರಾವ್ ಮದುವೆಯಾಗಿದ್ದರು. ಜತಿನ್ ಹುಕ್ಕೇರಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪತಿಯ ಮೇಲೂ ತನಿಖಾಧಿಕಾರಿಗಳು ಸಂಶಗೊಂಡಿದ್ದು, ಆತನ ವಿರುದ್ಧವೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಯಾರಿವರು ಜತಿನ್ ಹುಕ್ಕೇರಿ: ಜತಿನ್ ಹುಕ್ಕೇರಿ ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್‌ನಲ್ಲಿ ಬಿ ಆರ್ಚ್ ಪೂರ್ಣಗೊಳಿಸಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್ – ಎಕ್ಸಿಕ್ಯುಟಿವ್ ಎಜುಕೇಶನ್‌ನಿಂದ ಡಿಸ್ರಪ್ಟಿವ್ ಮಾರ್ಕೆಟ್ ಇನ್ನೋವೇಶನ್‌ನಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ.ಅಲ್ಲದೆ ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದಿದ್ದಾರೆ.
ಹುಕ್ಕೇರಿಯ ಅತ್ಯಂತ ಗಮನಾರ್ಹ ಯೋಜನೆಗಳಲ್ಲಿ ಬೆಂಗಳೂರಿನಲ್ಲಿರುವ ಕಾಕ್‌ಟೈಲ್ ಬಾರ್ ಮತ್ತು ಡಿನ್ನರ್ ಹ್ಯಾಂಗೊವರ್ ಒಂದು. ಬೆಂಗಳೂರಿನಲ್ಲಿ ಅವರ ಕ್ಲೈಂಟ್ ಪೋರ್ಟ್‌ಫೋಲಿಯೊದಲ್ಲಿ ಹ್ಯಾಂಗೊವರ್, ಬೆಂಗಳೂರು XOOX, ಬ್ರೂಮಿಲ್ ಮತ್ತು ಆಲಿವ್ ಬೀಚ್ ಸೇರಿವೆ. ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ದೆಹಲಿಯಲ್ಲಿ ಮಂಕಿ ಬಾರ್ ಮತ್ತು ಮುಂಬೈನಲ್ಲಿ ಗೇಟ್‌ವೇ ಟ್ಯಾಪ್‌ರೂಮ್‌ನಂತಹ ಯೋಜನೆಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಇನ್ನು ರನ್ಯಾ ರಾವ್ ಪರ್ಸಂಟೇಜ್ ಲೆಕ್ಕದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ತಾನು ಪಡೆದ ಚಿನ್ನವನ್ನು ರನ್ಯಾ ರಾವ್ ಸಂಬಂಧ ಪಟ್ಟವರಿಗೆ ತಲುಪಿಸಿದರೆ, 4 ಪರ್ಸೆಂಟ್‌ನಷ್ಟು ಹಣ ಸಿಗುತ್ತಿತ್ತು. ಒಂದು ವೇಳೆ 14.8 ಕೆಜಿ ತೂಕದ ಚಿನ್ನವನ್ನು ಕೊಡಬೇಕಾದ ಕಡೆಗೆ ತಲುಪಿಸಿದರೆ, ಈಕೆಗೆ ಸುಮಾರು 50 ಲಕ್ಷ ರೂಪಾಯಿ ಹಣ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು ಎಂದು ವರದಿಯಾಗಿದೆ. ಈ ಹಿಂದೆ ಕೂಡ ಸಾಕಷ್ಟು ಬಾತಿ ದುಬೈಗೆ ಪ್ರಯಣ ಬೆಳೆಸಿದ್ದ ರನ್ತಾ ರಾವ್ ಹಲವು ಬಾರಿ ಗೋಲ್ಡ್ ಅನ್ನು ಸಾಗಿಸಿದ್ದರು ಅಂತಾನೂ ವರದಿಯಾಗಿದೆ.