newsics.com
ಇತ್ತೀಚಿಗೆ ಡೇಟಿಂಗ್ ಸಾಮಾನ್ಯವಾಗಿದ್ದು, ಮದುವೆಗೂ ಮುನ್ನ ಅಥವಾ ಪ್ರೀತಿಯಲ್ಲಿ ಬೀಳೋ ಮುನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಜನ ಡೇಟಿಂಗ್ ಹೋಗ್ತಾರೆ. ಈಗಂತೂ ಕ್ಯಾಶುವಲ್ ಡೇಟಿಂಗ್, ಆನ್ಲೈನ್ ಡೇಟಿಂಗ್, ಸ್ಪೀಡ್ ಡೇಟಿಂಗ್, ಸಿಚುವೇಶನಲ್ ಡೇಟಿಂಗ್ ಅಂತ ಹೊಸ ಹೊಸ ಡೇಟಿಂಗ್ ಟ್ರೆಂಡ್ ಚಾಲ್ತಿಯಲ್ಲಿದೆ. ಇದಕ್ಕೆ ಸೇರ್ಪಡೆಯೆಂಬಂತೆ ಫ್ಲಡ್‌ಲೈಟಿಂಗ್ ಡೇಟಿಂಗ್ ಎಂಬ ಹೊಸ ಡೇಟಿಂಗ್ ಟ್ರೆಂಡ್ ಒಂದು ಶುರುವಾಗಿದೆ.
ಏನಿದು ‘ಫ್ಲಡ್‌ಲೈಟಿಂಗ್’?
ಇದೊಂದು ಗೊಂದಲಮಯ ಡೇಟಿಂಗ್ ವಿದ್ಯಮಾನವಾಗಿದೆ, ಇದರಲ್ಲಿ ವ್ಯಕ್ತಿಗಳು ಮೊದಲ ಡೇಟ್‌ನಲ್ಲೇ ತಮ್ಮೆಲ್ಲ ಭಾವನೆಗಳನ್ನು ಎಕ್ಸ್‌ಪ್ರೆಸ್ ಮಾಡಿ ಬಿಡುತ್ತಾರೆ. ತಮ್ಮ ಹಿಂದಿನ ಪ್ರೀತಿ, ಪರ್ಸನಲ್ ಆಘಾತ, ಘಟನಗೆಳು ಹೀಗೆ ತಮ್ಮೆಲ್ಲಾ ವಿಷಯ, ಭಾವನೆಗಳನ್ನು ಅವರ ಮುಂದೆ ಹೇಳಿಕೊಳ್ಳುವುದೇ ‘ಫ್ಲಡ್‌ಲೈಟಿಂಗ್’.
ಆತ್ಮೀಯತೆ, ಸಂಬಂಧ ಮುಂದುವರಿಯುವ ಬಗ್ಗೆ ಹೆಚ್ಚೆಚ್ಚು ಭಾರಿ ಮೀಟ್ ಮಾಡಬೇಕು, ಡೇಟ್ ಮಾಡಬೇಕು ಅನ್ನೋ ಫಜೀತಿ ಇದ್ರಲ್ಲಿ ಇರಲ್ಲ, ಮೊದಲ ಭೇಟಿಯಲ್ಲಿಯೇ ನೀವು ನಿಮ್ಮ ನಿರ್ಧಾರ ಮಾಡಿ ಬಿಡಬಹುದು. ಹಳೇ ಪ್ರೀತಿಯ ಬಗ್ಗೆ ಹೇಳಿಕೊಳ್ಳುವ ಚಾನ್ಸ್ ಇರೋ ಕಾರಣ ಲವ್‌ಫೇಲ್ಯೂರ್ ಆದವರಿಗೆ, ಮಾಜಿಗಳಿಗೆ ಇದೊಂದು ಬೆಸ್ಟ್ ಮಾರ್ಗವಾಗಿದೆ.
ಡೇಟಿಂಗ್ ಅಪ್ಲಿಕೇಶನ್ ಸೋ ಸಿಂಕ್ಡ್‌ನ ಸಹ-ಸಂಸ್ಥಾಪಕಿ ಜೆಸ್ಸಿಕಾ ಆಲ್ಡರ್ಸನ್, ಈ ಪ್ರವೃತ್ತಿ ಬಗ್ಗೆ ಮಾತನಾಡಿದ್ದು, “ಇದು ಅನ್ಯೋನ್ಯತೆಯನ್ನು ವೇಗಗೊಳಿಸಲು ಅಥವಾ ವ್ಯಕ್ತಿಯು ನಿಮ್ಮನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ನೋಡುವುದು ಮತ್ತು ಏಕಕಾಲದಲ್ಲಿ ಬಹಳಷ್ಟು ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದನ್ನು ಒಳಗೊಂಡಿರುತ್ತದೆ” ಎಂದಿದ್ದಾರೆ. ಈ ವಿಧಾನವು ಕೆಲವರಿಗೆ ಭಾವನಾತ್ಮಕವಾಗಿ ಹೊರೆ ಎನಿಸಿದರೆ, ಇನ್ನು ಕೆಲವರಿಗೆ ರಿಲೇಷನ್‌ಶಿಫ್‌ನಲ್ಲಿ ವರ್ಕ್ ಆಗುತ್ತೆ ಎಂದೆನಿಸಿದೆ.
ಈ ವಿಧಾನ ನಿಮಗೆ ಸರಿ ಎನಿಸಿ ಇದನ್ನು ಫಾಲೋ ಮಾಡ್ತಿದ್ದರೆ ಸ್ವಲ್ಪ ಎಚ್ಚರಿಕೆಯನ್ನು ಕೂಡ ಅನುಸರಿಸಿ ಅನ್ನೋದು ತಜ್ಞರ ಎಚ್ಚರಿಕೆ. ಅತಿಯಾಗಿ ಪರ್ಸನಲ್ ವಿವರಗಳನ್ನು ಅಗತ್ಯ ಮೀರಿ ಹಂಚಿಕೊಳ್ಳಲು ಹೋಗಬೇಡಿ. ತುಂಬಾ ಬೇಗನೆ ಅತಿಯಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಹಿತಾಸಕ್ತಿಗಳನ್ನು ನಿಜವಾಗಿಯೂ ಮನಸ್ಸಿನಲ್ಲಿಟ್ಟುಕೊಳ್ಳದ ಯಾರೋ ಒಬ್ಬರು ನಿಮ್ಮನ್ನು ಶೋಷಣೆಗೆ ಒಳಪಡಿಸಬಹುದು” ಎಂದು ಜೆಸ್ಸಿಕಾ ಆಲ್ಡರ್ಸನ್ ಹೇಳುತ್ತಾರೆ.
ಇಲ್ಲಿ ಮಾತುಕತೆ ಒನ್ ಸೈಡೆಡ್ ಆಗಿರುವ ಸಾಧ್ಯತೆ ಇದೆ. ಅತೀಯಾಗಿ ಭಾವನೆಗಳ ಹಂಚಿಕೊಂಡಾಗ ಮೋಸ ಮಾಡುವ, ವೀಕ್‌ನೆಸ್ ಅನ್ನು ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. ಡೇಟಿಂಗ್ ಜಗತ್ತನ್ನು ಅಲ್ಲಾಡಿಸುವ ಇತ್ತೀಚಿನ ಗುಟ್ಟಿನ ತಂತ್ರಗಳಲ್ಲಿ ಫ್ಲಡ್‌ಲೈಟಿಂಗ್ ಒಂದಾಗಿದೆ, ಇದು ನಿಜವಾದ ಸಂಪರ್ಕ ಮತ್ತು ಭಾವನಾತ್ಮಕ ಕುಶಲತೆಯ ನಡುವಿನ ರೇಖೆಯನ್ನು ಮಸುಕುಗೊಳಿಸುವ ಲೆಕ್ಕಾಚಾರದ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಭಾವನಾತ್ಮಕ ಹಾನಿ
ಫ್ಲಡ್‌ಲೈಟಿಂಗ್ ಎಂಬುದು ಕೂಡ “ಹುಡ್‌ಫಿಶಿಂಗ್”, “ಥ್ರೋನಿಂಗ್” ನಂತಹ ವಂಚನೆಗಳಿಗೆ ಸೇರುವ ಡೇಟಿಂಗ್ ತಂತ್ರಗಳಲ್ಲಿ ಒಂದಾಗಿರೋ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇದನ್ನು ಅನುಸರಿಸುವಾಗ ಮೈಯೆಲ್ಲಾ ಕಣ್ಣಾಗಿಸಿಕೊಳ್ಳಿ.
ಅತಿಯಾದ ಹಂಚಿಕೆಯಂತೆ ತೋರುವ ಈ ವಿಧಾನ ಸಂಬಂಧಗಳಲ್ಲಿ ವಿಷಕಾರಿ ಚಲನಶೀಲತೆಯನ್ನು ಸೃಷ್ಟಿಸಬಹುದು. ಫ್ಲಡ್‌ಲೈಟಿಂಗ್ ಹೆಚ್ಚಾಗಿ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಆಲ್ಡರ್ಸನ್ ಎಚ್ಚರಿಕೆ ನೀಡಿದ್ದಾರೆ.
ಸಂಬಂಧವನ್ನು ಗಟ್ಟಿಗೊಳಿಸಲು, ಕ್ಲ್ಯಾರಿಟಿ ಪಡೆಯಲು ಎಲ್ಲವನ್ನೂ ಹಂಚಿಕೊಳ್ಳುವ ಮಾರ್ಗವೇ ನಮ್ಮನ್ನು ಎಮೋಷನಲಿ ಒತ್ತಡಕ್ಕೆ ನೂಕಬಹುದು. ಇದರಿಂದ ಆರೋಗ್ಯಕರ ಮತ್ತು ಸಮತೋಲಿತ ಸಂಬಂಧವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ ಅನ್ನೋದು ಪರಿಣಿತರ ಅಭಿಪ್ರಾಯ.