newsics.com
‘ಸಿಖಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಈ ನಿರೀಕ್ಷೆ ಹುಸಿ ಆಗುವ ಸೂಚನೆ ಸಿಕ್ಕಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಧ್ಯೆ ಯಾವುದೇ ಕೆಮಿಸ್ಟ್ರಿ ಕಾಣಿಸುತ್ತಿಲ್ಲ
ಇತ್ತೀಚೆಗೆ ಈ ಚಿತ್ರದ ಹಾಡು ರಿಲೀಸ್ ಆಗಿದ್ದು, ಟ್ರೋಲ್ ಮಾಡೋರಿಗೆ ಆಹಾರ ಆಗಿದೆ. ಇದಕ್ಕೆ ರಶ್ಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ಸಿಖಂದರ್’ ಚಿತ್ರದ ‘ಜೊಹ್ರಾ ಜಬೀನ್..’ ಹಾಡು ರಿಲೀಸ್ ಆಗಿದೆ. ಈ ಚಿತ್ರದ ಮೊದಲ ಹಾಡು ಇದಾಗಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಡ್ಯಾನ್ಸ್ ಮಾಡೋದು ಈ ಹಾಡಿನಲ್ಲಿ ಇದೆ. ಈ ಹಾಡು ಟ್ರೆಂಡ್ ಏನೋ ಆಗುತ್ತಿದೆ. ಆದರೆ, ಟ್ರೋಲ್ಗಳ ಕಾರಣಕ್ಕೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
‘ಸಿಖಂದರ್’ ಸಿನಿಮಾದಲ್ಲಿ ಆಯಂಗ್ರಿ ಯಂಗ್ಮ್ಯಾನ್ ಲುಕ್ನಲ್ಲಿ ಸಲ್ಲು
‘ಸಿಖಂದರ್’ ಸಿನಿಮಾ ಈ ವರ್ಷ ಈದ್ಗೆ ತೆರೆಗೆ ಬರಲಿದೆ. ರಿಲೀಸ್ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಈ ಚಿತ್ರವನ್ನು ಖ್ಯಾತ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ