newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ಚತುರ್ಥಿ
03-03-2025, ಸೋಮವಾರ
# ವಿನಾಯಕ ಚತುರ್ಥಿ, ಪಂಚಕ ಸಮಾಪ್ತಿ
# ವಿಶ್ವ ವನ್ಯಜೀವಿ ದಿನ
# ವಿಶ್ವ ಶ್ರವಣ ದಿನಾಚರಣೆ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 03/03/2025
ತಿಂಗಳು – ಮಾರ್ಚ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಚತುರ್ಥಿ 18:01:33
ಪಕ್ಷ – ಶುಕ್ಲ
ನಕ್ಷತ್ರ – ರೇವತಿ 06:38:07
ನಕ್ಷತ್ರ – ಅಶ್ವಿನಿ 28:28:42*
ಯೋಗ – ಶುಕ್ಲ 08:55:57
ಯೋಗ – ಬ್ರಹ್ಮ 29:23:28*
ಕರಣ – ವಾಣಿಜ 07:30:07
ಕರಣ – ವಿಷ್ಟಿ (ಭದ್ರ)18:01:33
ಕರಣ – ಭವ 28:36:37*
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ). ಫಾಲ್ಗುಣ
ಚಂದ್ರ ರಾಶಿ – ಮೀನ till 06:38:07
ಚಂದ್ರ ರಾಶಿ – ಮೇಷ from 06:38:07
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ – 06:35:28
ಸೂರ್ಯಾಸ್ತ – 18:27:39
ಹಗಲಿನ ಅವಧಿ – 11:52:10
ರಾತ್ರಿಯ ಅವಧಿ – 12:07:14
ಚಂದ್ರೋದಯ – 08:54:44
ಚಂದ್ರಾಸ್ತ – 21:48:13
ರಾಹು ಕಾಲ – 08:04 – 09:34 ಅಶುಭ
ಯಮಘಂಡ ಕಾಲ – 11:03 – 12:32 ಅಶುಭ
ಗುಳಿಕ ಕಾಲ – 14:01 – 15:30
ಅಭಿಜಿತ್ – 12:08 – 12:55 ಶುಭ
ದುರ್ಮುಹೂರ್ತ – 12:55 – 13:43 ಅಶುಭ
ದುರ್ಮುಹೂರ್ತ – 15:18 – 16:05 ಅಶುಭ
—
ಇಂದಿನ ಮಾತು
ನಿಮ್ಮ ಇಂದಿನ ತಾಳ್ಮೆ ನಾಳೆಯ ಶಕ್ತಿ.
—
No one can lift you or lower you without your permission.. You are the only one responsible for your being.
—
ಇಂದಿನ ಸುಭಾಷಿತ
ಯದ್ಯಪಿ ರಟತಿ ಸರೋಷಂ
ಮೃಗಪತಿಪುರತೋಽಪಿ ಗೋಮಾಯುಃ |
ತದಪಿ ನ ಕುಪ್ಯತಿ ಸಿಂಹೋಽಪಿ
ಅಸದೃಶಪುರುಷೇಷು ಕಃ ಕೋಪಃ ||
ಮೃಗರಾಜನ ಸಮ್ಮುಖದಲ್ಲಿ ನರಿಯು ರೋಷದಿಂದ ಊಳಿಟ್ಟರೂ ಸಿಂಹವು ಕೋಪಿಸಿಕೊಳ್ಳುವುದೇ ಇಲ್ಲ. ಅಸಮಾನ ಪುರುಷರಲ್ಲಿ ಯಾರು ತಾನೆ ಕೋಪಿಸಿಕೊಳ್ಳುತ್ತಾರೆ?
—
ಇಂದಿನ ಪದಾರ್ಥ
ಅಜ = Not born, existing from eternity
ಅಜಗರ = that swallows a goat
—
ಇಂದಿನ ಓದ
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||
35) ಪ್ರಭುಃ
ಭಗವಂತ ಸರ್ವಸಮರ್ಥ ಆದ್ದರಿಂದ ಆತ ಎಲ್ಲರ ಪ್ರಭು.
36) ಈಶ್ವರಃ
ಈಶರು ಎಂದರೆ ನಮ್ಮ ದೇಹ ಹಾಗೂ ಪ್ರಪಂಚಕ್ಕೆ ಸಂಬಂಧಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ ಶನಿ- ಪೃಥ್ವಿಯ ಅಭಿಮಾನಿ ದೇವತೆ; ಬುಧ- ನೀರಿನ ಅಭಿಮಾನಿ ದೇವತೆ; ಗಣಪತಿ- ಆಕಾಶದ ಅಭಿಮಾನಿ ದೇವತೆ; ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ- ನಾಲಿಗೆಯ ಅಭಿಮಾನಿ ದೇವತೆ; ಅಗ್ನಿ- ಮಾತಿನ ಅಭಿಮಾನಿ ದೇವತೆ; ಇಂದ್ರ- ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ; ಅನಿರುದ್ಧ, ಬೃಹಸ್ಪತಿ, ವರುಣ, ಮಿತ್ರ, ಇಂದ್ರ, ಕಾಮ, ಗರುಡ, ಶೇಷ, ರುದ್ರ, ವಾಯು- ಇವರೆಲ್ಲರೂ ಮನಸ್ಸಿನ ಅಭಿಮಾನಿ ದೇವತೆಗಳು. ಶ್ರದ್ಧೆಯ ದೇವತೆ- ಸರಸ್ವತಿ. ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ಧರಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಠನಾದವ, ಈ ದೇಹದಲ್ಲಿರುವ ಸರ್ವ ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.
***