Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > Life style ಕಾಲ್ಬೆರಳುಗಳಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ!
ಅನಾವರಣಪ್ರಮುಖಲೈಫ್‌ಸ್ಟೈಲ್ಸೌಂದರ್ಯ

Life style ಕಾಲ್ಬೆರಳುಗಳಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ!

Share
2 Min Read
SHARE

newsics.com

ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಲು ಸಹಕಾರಿಯಾಗಿದೆ.

ಕಾಲ್ಬೆರಳಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಕಾಲಿನ ಬೆರಳು ಹೇಗಿದೆ, ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದ ಇದ್ಯಾ? ಹೀಗೆ ಬೆರಳಿನ ಆಕಾರ ನೋಡಿ ನೈಜ ವ್ಯಕ್ತಿತ್ವ ತಿಳಿಯಬಹುದು.

1. ಈಜಿಪ್ಟಿಯನ್ ಬೆರಳು
ಕಾಲಿನ ಹೆಬ್ಬೆರಳು ಉದ್ದವಾಗಿ ದೊಡ್ಡವಾಗಿದ್ದು, ಉಳಿದ ನಾಲ್ಕು ಬೆರಳುಗಳು ಕಿರುಬೆರಳಿನತ್ತ ವಾಲಿಕೊಂಡಿದ್ದರೆ ಇದನ್ನು ಈಜಿಪ್ಟಿಯನ್ ಬೆರಳು. ಇಂತಹ ಬೆರಳು ಹೊಂದಿದವರು ಶಕ್ತಿಯುತವಾದ ತೇಜಸ್ಸನ್ನು ಹೊಂದಿದ್ದು, ಎಲ್ಲರನ್ನೂ ಆಕರ್ಷಿಸುತ್ತಾರೆ. ಸಮಾಜದಲ್ಲಿ ಗುರುತಿಸಿಕೊಳ್ಳುವ ಕಾರಣ ಎಲ್ಲರೂ ಈ ವ್ಯಕ್ತಿಗಳನ್ನು ಗೌರವದಿಂದ ಕಾಣುತ್ತಾರೆ. ಮಾತಿನಲ್ಲಿ ಹಾಗೂ ಇನ್ನಿತರ ವಿಷಯಗಳಲ್ಲಿ ಇವರನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂಗೋಪಿಗಳಾಗಿದ್ದು ಕೋಪ ಬಂದರೆ ಯಾವುದರ ಬಗ್ಗೆಯೂ ಯೋಚಿಸದೇ ವರ್ತಿಸುತ್ತಾರೆ. ಎಷ್ಟು ಒಳ್ಳೆಯವರೋ ಕೋಪದ ವಿಷಯದಲ್ಲಿ ಅಷ್ಟೇ ಕೆಟ್ಟವರಾಗಿರುತ್ತಾರೆ.

2. ರೋಮನ್ ಕಾಲ್ಬೆರಳು
ಹೆಬ್ಬೆರಳು ಸೇರಿದಂತೆ ಮೊದಲ ಮೂರು ಬೆರಳು ಒಂದೇ ಉದ್ದವಿದ್ದು, ಇನ್ನು ಉಳಿದ ಎರಡು ಬೆರಳು ಗಿಡ್ಡವಿದ್ದರೆ ಅದು ರೋಮನ್ ಕಾಲ್ಬೆರಳು. ಈ‌ ಮಾದರಿಯ ಕಾಲ್ಬೆರಳುಗಳನ್ನು ಹೊಂದಿದವರು ಶ್ರಮಜೀವಿಗಳು. ಜೀವನದಲ್ಲಿ ಪ್ರತಿ ಹಂತದಲ್ಲಿಯೂ ಕಷ್ಟ ಪಟ್ಟು ದುಡಿದು ಯಶಸ್ಸು ಕಾಣುತ್ತಾರೆ. ಆದರೆ ತಾನು ಅಂದುಕೊಂಡಂತೆ ಬದುಕಬೇಕೆನ್ನುವ ಛಲ ಇವರಲ್ಲಿ ಇರುತ್ತದೆ. ಇತತರಿಗಿಂತ ತಮ್ಮ ಮೇಲೆ ಹೆಚ್ಚಿನ ನಂಬಿಕೆ ಹೊಂದಿದ್ದು ಎದುರಾಗುವ ಕಷ್ಟಗಳನ್ನು ಒಬ್ಬಂಟಿಯಾಗಿಯೇ ಎದುರಿಸುತ್ತಾರೆ.

3. ಗ್ರೀಕ್ ಕಾಲ್ಬೆರಳು
ಕಾಲಿನ ಮಧ್ಯದ ಬೆರಳು ಉಳಿದ ಬೆರಳುಗಳಿಗಿಂತ ಉದ್ದವಿದ್ದರೆ ಅದನ್ನು ಗ್ರೀಕ್ ಕಾಲ್ಬೆರಳು ಎನ್ನಲಾಗುತ್ತದೆ. ಇಂತಹ ಕಾಲ್ಬೆರಳು ಹೊಂದಿದವರು ಜೀವನ ಹಾಗೂ ಕೆಲಸಗಳ ನಡುವೆ ಸಮತೋಲನ ಕಾಯ್ದುಕೊಂಡು ತಮ್ಮದೇ ಹಾದಿಯಲ್ಲಿ ಸಾಗಿ ಯಶಸ್ಸು ಗಳಿಸುತ್ತಾರೆ. ನಿಖರ ಹಾಗೂ ತಾರ್ಕಿಕ ಚಿಂತನೆಯಿಂದಾಗಿ ಎಲ್ಲರನ್ನೂ ಬೆರಗು ಮೂಡಿಸುತ್ತಾರೆ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಇವರ ಕಠಿಣ ಪರಿಶ್ರಮಕ್ಕೆ ಯಶಸ್ಸು ದೊರೆಯುತ್ತದೆ. ತನ್ನ ಸುತ್ತಮುತ್ತಲಿನವರಿಗೆ ಸಲಹೆ ನೀಡುವ ಮೂಲಕ ಅವರನ್ನು ಮುನ್ನಡೆಸಿಕೊಂಡು ಹೋಗುವ ಮನೋಭಾವವಿರುತ್ತದೆ.

4. ಚೌಕಾಕಾರದ ಪಾದ
ಹೆಬ್ಬೆರಳು ಸೇರಿದಂತೆ ಎಲ್ಲಾ ಕಾಲ್ಬೆರಳುಗಳು ಸಮಾನವಾಗಿದ್ದರೆ ಅದು ಚೌಕಾಕಾರದ ಪಾದ. ಈ ರೀತಿ ಕಾಲ್ಬೆರಳುಗಳಿದ್ದರೆ ಈ ವ್ಯಕ್ತಿಗಳು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಹೆಚ್ಚು ಪ್ರಾಮಾಣಿಕರಾಗಿದ್ದು, ನಿರ್ಧಾರ ಕೈಗೊಳ್ಳುವಾಗ ಜಾಗರೂಕರಾಗಿರುತ್ತಾರೆ. ನಿರ್ಧಾರ ಕೈಗೊಳ್ಳುವ ಮುನ್ನ ಹೆಚ್ಚು ಸಮಯ ಆಲೋಚಿಸುತ್ತಾರೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳುತ್ತಾರೆ. ಶಾಂತ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಯಾರ ಪ್ರಭಾವಕ್ಕೂ ಅಷ್ಟು ಸುಲಭವಾಗಿ ಒಳಗಾಗುವುದಿಲ್ಲ.

Life style ಕೈ ಬೆರಳುಗಳಿಂದ ನಿಮ್ಮ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ತಿಳಿದುಕೊಳ್ಳಿ..!

TAGGED:Your toes can reveal your personality!
Share This Article
Facebook Twitter Copy Link Print
Previous Article no-fly zone ತಿರುಪತಿ: ವಿಮಾನ ಹಾರಾಟ ನಿಷೇಧಿತ ಪ್ರದೇಶವೆಂದು ಘೋಷಿಸಲು ಕೇಂದ್ರಕ್ಕೆ ಟಿಟಿಡಿ ಮನವಿ
Next Article Life style ಮಕ್ಕಳ ಭವಿಷ್ಯಕ್ಕಾಗಿ ಕಡ್ಡಾಯವಾಗಲಿ ನವಜಾತ ಶಿಶು ʼಶ್ರವಣ ಪರೀಕ್ಷೆʼ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?