newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ
27-02-2025, ಗುರುವಾರ
# ದರ್ಶ ಅಮಾವಾಸ್ಯೆ, ಪಂಚಕ ಪ್ರಾರಂಭ
# ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ಜಾತ್ರೆ
# ಚಂದ್ರಶೇಖರ ಆಜಾದ್ ಬಲಿದಾನ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 27/02/2025
ತಿಂಗಳು – ಫೆಬ್ರವರಿ
ಬಣ್ಣ – ಹಳದಿ
ವಾರ – ಗುರುವಾರ
ತಿಥಿ ಚತುರ್ದಶಿ 08:54:12
ತಿಥಿ ಅಮಾವಾಸ್ಯೆ 30:13:52* (Leap)
ಪಕ್ಷ ಕೃಷ್ಣ
ನಕ್ಷತ್ರ ಧನಿಷ್ಠ 15:42:44
ಯೋಗ ಶಿವ 23:39:50
ಕರಣ ಶಕುನಿ 08:54:12
ಕರಣ ಚತುಷ್ಪಾದ 19:36:49
ಕರಣ ನಾಗವ30:13:52*
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ ಕುಂಭ
ಸೂರ್ಯ ರಾಶಿ ಕುಂಭ
ಋತು ಶಿಶಿರ
ಸೂರ್ಯೋದಯ 06:37:40
ಸೂರ್ಯಾಸ್ತ 18:27:02
ಹಗಲಿನ ಅವಧಿ 11:49:21
ರಾತ್ರಿಯ ಅವಧಿ 12:10:06
ಚಂದ್ರಾಸ್ತ 17:57:25
ಚಂದ್ರೋದಯ 30:44:16*
ರಾಹು ಕಾಲ 14:01 – 15:30 ಅಶುಭ
ಯಮಘಂಡ ಕಾಲ 06:38 – 08:06 ಅಶುಭ
ಗುಳಿಕ ಕಾಲ 09:35 – 11:04
ಅಭಿಜಿತ್ 12:09 – 12:56 ಶುಭ
ದುರ್ಮುಹೂರ್ತ. ಇ 10:34 – 11:21 ಅಶುಭ
ದುರ್ಮುಹೂರ್ತ 15:18 – 16:05 ಅಶುಭ
—
ಇಂದಿನ ಮಾತು
ಮನುಷ್ಯ ಉಡುಗೊರೆಗಳಿಗೆ ಆಸೆಪಡುತ್ತಾನೆ. ಆದರೆ ಅದರ ಬಳಕೆಗೆ ಅಲ್ಲ. ಈ ಬದುಕು ಭಗವಂತನ ಉಡುಗೊರೆ. ಸಂಪೂರ್ಣವಾಗಿ ಉಪಯೋಗಿಸೋಣ.
You’re not grown until you know how to communicate, apologize, be truthful and accept accountability without blaming someone else.
—
ಇಂದಿನ ಸುಭಾಷಿತ
🚩🔯🌸🌄⚛🌅🌸🔯
ಮನಸ್ತೇ ಪಾದಾಬ್ಜೇ ನಿವಸತು
ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ
ಶ್ರುತಿರಪಿ ಕಥಾಕರ್ಣನವಿಧೌ |
ತವ ಧ್ಯಾನೇ ಬುದ್ಧಿರ್ನಯನ-
ಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ಕೈರ್ವಾ
ಪರಮಶಿವ ಜಾನೇ ಪರಮತಃ ||
(ಶಿವಾನಂದಲಹರೀ)
ನನ್ನ ಮನವು ನಿನ್ನ ಪದಕಮಲದಲ್ಲಿ ನೆಲಸಲಿ. ಮಾತು ಸ್ತೋತ್ರಗಳಲ್ಲಿ ತೊಡಗಲಿ. ಕೈಗಳು ನಿನ್ನನ್ನು ಪೂಜಿಸುವುದರಲ್ಲಿಯೂ, ಕಿವಿಗಳು ನಿನ್ನ ಮಂಗಲಮಯವಾದ ಕಥೆಗಳನ್ನು ಕೇಳುವುದರಲ್ಲಿಯೂ, ಬುದ್ಧಿಯು ನಿನ್ನನ್ನು ಧ್ಯಾನ ಮಾಡುವುದರಲ್ಲಿಯೂ, ಕಣ್ಣಳೆರಡೂ ನಿನ್ನ ಮಂಗಳ ಮೂರ್ತಿಯನ್ನು ದರ್ಶನ ಮಾಡುವುದರಲ್ಲಿಯೂ ತೊಡಗಲಿ. ಹೇ ಪರಶಿವನೇ, ಇದಕ್ಕೆ ಮೇಲಾಗಿ ಇತರರ ಗ್ರಂಥಗಳನ್ನೇಕೆ ನಾನು ತಿಳಿಯಲಿ?
—
ಇಂದಿನ ಪದಾರ್ಥ
ಅನತ = Not bent
ಅನಧೀನಕ = Independent
—
ಇಂದಿನ ಓದು
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||
29) ಭೂತಾದಿಃ
ಭೂತಾದಿ ಎಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ, ಎಲ್ಲಾ ಚರಾಚರಾತ್ಮಕವಾದ ಹಾಗೂ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ. ಅಷ್ಟೇ ಅಲ್ಲ, ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು, ಕೊನೆಗೆ ಸಂಹಾರ ಮಾಡುವವನೂ ಅವನೇ.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ, ಪ್ರಪಂಚದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದವನು ಭೂತಾದಿ. ಇಷ್ಟೇ ಅಲ್ಲದೆ ಭೂತರು ಎಂದರೆ ಮುಕ್ತರು ಕೂಡ ಹೌದು. ಮುಕ್ತರಿಗೆ ಮುಕ್ತಿಯನ್ನು ಕರುಣಿಸಿವನು ಭೂತಾದಿ.