newsics.com
ಗೋವಾ : ನಟಿಗೆ ಗೋವಾದಲ್ಲಿ ಆಘಾತಕಾರಿ ಅನುಭವ ಆಗಿದೆ. ಹೀರೋಯಿನ್ ಮುಂದೆಯೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.
ಈ ಸಂಬಂಧ ಸೋಮವಾರ ಗೋವಾ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟಿ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ನಟಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಬರೆದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ.. ನಾನು ಮತ್ತು ನನ್ನ ಸ್ನೇಹಿತೆ ನಮ್ಮ ಬೈಕುಗಳಲ್ಲಿ ಸವಾರಿ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಒಂದು ಕೈಯಿಂದ ಬೈಕು ಓಡಿಸುತ್ತ ಇನ್ನೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.. ಅಸಹ್ಯಕರ ಕೃತ್ಯವನ್ನು ನೋಡಿ, ನಾವು ನಮ್ಮ ಕಾರಿನ ವೇಗವನ್ನು ಹೆಚ್ಚಿಸಿ ಅಲ್ಲಿಂದ ಹೊರಟೆವು. ಇಂತಹ ಪುರುಷರಿಗೆ ಈ ರೀತಿ ಭಯಾನಕ ಕೃತ್ಯ ಎಸಗಲು ಧೈರ್ಯ ಹೇಗೆ ಬರುತ್ತೆ..?” ಇದರಿಂದ ಅವರಿಗೆ ಯಾವ ರೀತಿಯ ಸುಖ ಸಿಗುತ್ತದೆ..? ಯಾರನ್ನಾದರೂ ನೋಯಿಸುವ ಮೊದಲು ಯೋಚಿಸುವುದಿಲ್ಲವೇ.. ಆದರೆ ಇದಕ್ಕೆ ಸುಲಭವಾದ ಪರಿಹಾರವೆಂದರೆ ಹುಡುಗಿಯರು ಮನೆಯಲ್ಲಿಯೇ ಇರಬೇಕೇ ಅಂತ ನಟಿ ಪ್ರಶ್ನಿಸಿದ್ದಾರೆ.
ಪೋಸ್ಟ್ ನೋಡಿದ ನಂತರ ಅವರು ಸಂತ್ರಸ್ತೆಯನ್ನು ಸಂಪರ್ಕಿಸಿ ಸೋಮವಾರ ಮಧ್ಯಾಹ್ನ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.