Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Flying car ಸಿದ್ಧವಾಯ್ತು ಹಾರುವ ಕಾರು, ಮುಂಗಡ ಬುಕಿಂಗ್ ಶುರು, ಕಾರಿನ ಬೆಲೆ ಎಷ್ಟು? ವಿಡಿಯೋ ನೋಡಿ
ಅನಾವರಣಪ್ರಮುಖವಿದೇಶವೈರಲ್

Flying car ಸಿದ್ಧವಾಯ್ತು ಹಾರುವ ಕಾರು, ಮುಂಗಡ ಬುಕಿಂಗ್ ಶುರು, ಕಾರಿನ ಬೆಲೆ ಎಷ್ಟು? ವಿಡಿಯೋ ನೋಡಿ

Share
2 Min Read
SHARE

newsics.com

ಹಾರುವ ಕಾರು ಸಿದ್ಧವಾಗಿದೆ. ಎರಡು ವರ್ಷಗಳ ಹಿಂದೆಯೇ ಹಾರಾಡುವ ಕಾರಿಗೆ ಅಮೆರಿಕಾ ಅನುಮತಿ ನೀಡಿತ್ತು.

ಹಾರುವ ಕಾರಿನ ಟೆಸ್ಟಿಂಗ್ ಕೂಡ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾರುತ್ತಿರುವ ಕಾರಿನ ವಿಡಿಯೋ ವೈರಲ್ ಆಗಿದೆ.

ಸಿನಿಮಾ, ಸೀರಿಯಲ್‌ನಲ್ಲಿ ಮಾತ್ರ ನಾವು ಕಾರು ಹಾರಾಡೋದನ್ನು ನೋಡ್ತಿದ್ವಿ. ಇನ್ಮುಂದೆ ನಿಜವಾಗ್ಲೂ ಕಾರು ಹಾರುವುದನ್ನು ನೋಡಬಹುದು. ಹಾರುವ ಕಾರಿನಲ್ಲಿ ಕುಳಿತುಕೊಳ್ಳುವ ಸಮಯವೂ ಶೀಘ್ರವೇ ಬರಲಿದೆ.

ಹಾರುವ ಕಾರಿಗೆ ಪೆಟ್ರೋಲ್, ಡಿಸೇಲ್ ಬೇಕಾಗಿಲ್ಲ. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಲೋಮೀಟರ್ ದೂರ ಓಡಲಿದೆ.

ಅಮೆರಿಕದ ವಾಹನ ತಯಾರಕ ಕಂಪನಿ ಅಲೆಫ್ ಏರೊನಾಟಿಕ್ಸ್ (Aleph Aeronautics) ಈ ಕಾರನ್ನು ತಯಾರಿಸಿದೆ. ಅಲೆಫ್ ಮಾಡೆಲ್ ಎ ಕಾರಿನ ಪರೀಕ್ಷೆಯನ್ನು ಕಂಪನಿ ನಡೆಸುತ್ತಿದೆ.

ಹಾರುವ ಕಾರನ್ನು ಕ್ಯಾಲಿಫೋರ್ನಿಯಾದ ಸುರಕ್ಷಿತ ರಸ್ತೆಯಲ್ಲಿ ಪರೀಕ್ಷಿಸಲಾಗಿದೆ. ನಿಧಾನವಾಗಿ ಮೇಲೆ ಹಾರುವ ಕಾರು, ಕೆಳಗೆ ನಿಂತಿದ್ದ ಬಿಳಿ ಕಾರನ್ನು ದಾಟಿ ಮುಂದೆ ಹೋಗಿ ಲ್ಯಾಂಡ್ ಆಗುತ್ತೆ. ಈ ಕಾರು ಚಲಿಸಲು ಯಾವುದೆ ರನ್ ವೇ ಅಗತ್ಯವಿಲ್ಲ. ಕಾರು ಮೇಲೆ ಹಾರಿದ ವಿಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಅಲೆಫ್ ಏರೋನಾಟಿಕ್ಸ್‌ನ ಸಿಇಒ ಜಿಮ್ ಡುಖೋವ್ನಿ ಹೇಳಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಕಾರು ಅಲೆಫ್‌ನ ಮಾಡೆಲ್ ಝೀರೋದ ಅಲ್ಟ್ರಾಲೈಟ್ ಆವೃತ್ತಿಯಾಗಿದ್ದು ನಂತರ ಅದನ್ನು ಕಮರ್ಶಿಯಲ್ ಮಾಡೆಲ್ ಆಗಿ ಸಿದ್ಧಪಡಿಸಲಾಗಿದೆ.

ಈ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಇದು ಆಟೋಪೈಲಟ್ ಮೋಡ್‌ನಲ್ಲಿಯೂ ಹಾರಲು ಸಾಧ್ಯವಾಗುತ್ತದೆ. ಈ ಕಾರಿಗೆ ಜಾಲರಿ ಭಾಗವನ್ನು ಅಳವಡಿಸಲಾಗಿದೆ. ಅದರ ಕೆಳಗೆ ಎಂಟು ತಿರುಗುವ ರೋಟರ್‌ಗಳಿವೆ. ಇದು ಕಾರಿನ ಹಾರಾಟವನ್ನು ಆರಾಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ನೆಲದ ಮೇಲೂ ಓಡಿಸಬಹುದು. ಆಗ ಕಾರಿನಲ್ಲಿ ಅಳವಡಿಸಲಾದ ನಾಲ್ಕು ಸಣ್ಣ ಎಂಜಿನ್ ರಸ್ತೆಯಲ್ಲಿ ಓಡಲು ನೆರವಾಗುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ ಎಂದು ಕಂಪನಿ ಹೇಳಿದೆ.

ಮುಂಗಡ ಬುಕ್ಕಿಂಗ್ ಆರಂಭ:

ಕೇವಲ 13 ಸಾವಿರ ನೀಡಿ ನೀವು ಕಾರಿನ ಮುಂಗಡ ಬುಕ್ಕಿಂಗ್ ಮಾಡಹುದು. ಅದರೆ‌ಕಾರಿನ ಮೂಲ ಬೆಲೆ 2.5 ಕೋಟಿ ಎಂದು ಅಂದಾಜಿಸಲಾಗಿದೆ. ಈಗಾಗಲೇ 3300 ಮುಂಗಡ ಬುಕ್ಕಿಂಗ್ ನಡೆದಿದೆ ಎಂದು ಕಂಪನಿ ಹೇಳಿದೆ.

https://youtu.be/LtVUJjmVM9U?si=dfkn9DyfHFSwTXDJ

https://youtu.be/GB3Vz-mdzYw?si=ONKtWtzWGnRCKrFH

https://twitter.com/i/status/1892975716620263893

TAGGED:advance booking startReady flying car
Share This Article
Facebook Twitter Copy Link Print
Previous Article Modi ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಡೇಕೇರ್ ಕೇಂದ್ರ ತೆರೆಯಲು ಸರ್ಕಾರ ನಿರ್ಧಾರ: ಮೋದಿ
Next Article India VS Pakjstan 241 ರನ್ ಗೆ ಪಾಕಿಸ್ತಾನ ಆಲೌಟ್: ಟೀಂ ಇಂಡಿಯಾ ಗೆಲುವಿಗೆ 242 ರನ್ ಟಾರ್ಗೆಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?