newsics.com
ವಾಷಿಂಗ್ಟನ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ)ನ ಹೊಸ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ಅನುಮೋದಿಸಲು ಅಮೆರಿಕ ಸೆನೆಟ್ ಸಜ್ಜಾಗಿದೆ.
ಇದರೊಂದಿಗೆ 44 ವರ್ಷದ ಪಟೇಲ್ ಅವರು ಎಫ್‌ಬಿಐ ಮುಖ್ಯಸ್ಥರಾಗಿರುವ ಮೊದಲ ಭಾರತೀಯ ಅಮೇರಿಕನ್ ಎನಿಸಲಿದ್ದಾರೆ.
ಅವರು 51/47 ಮತಗಳೊಂದಿಗೆ ದೃಢೀಕರಣವನ್ನು ಪಡೆದಿದ್ದಾರೆ. ಮಾಜಿ ಗುಪ್ತಚರ ಅಧಿಕಾರಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಮಿತ್ರ ಪಟೇಲ್ ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಡೆಮೋಕ್ರಾಟ್‌ಗಳ ವಿರೋಧದ ಹೊರತಾಗಿಯೂ ಕಟ್ಟಾ ರಿಪಬ್ಲಿಕನ್ ಆಗಿರುವ ಪಟೇಲ್ ಅಧ್ಯಕ್ಷರ ರಾಜಕೀಯ ಶತ್ರುಗಳನ್ನು ಗುರಿಯಾಗಿಸಲು ಏಜೆನ್ಸಿಯನ್ನು ಬಳಸಬಹುದು ಎಂದು ಎಚ್ಚರಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಫ್‌ಬಿಐ ನಿರ್ದೇಶಕರ ನೇಮಕವು ಸಾಮಾನ್ಯವಾಗಿ 10 ವರ್ಷಗಳ ಅವಧಿಗೆ ಇರುತ್ತದೆ. ಆದರೆ ಅವರನ್ನು ಅಧ್ಯಕ್ಷರು ತೆಗೆದುಹಾಕಬಹುದು.
ಫೆಬ್ರವರಿ 25, 1980 ರಂದು ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ ಜನಿಸಿದ ಕಾಶ್ ಪಟೇಲ್ ಗುಜರಾತಿ ಭಾರತೀಯ ಮೂಲದವರು. ಅವರು ರಿಚ್ಮಂಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ನಂತರ ಪೇಸ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಜ್ಯೂರಿಸ್ ಡಾಕ್ಟರ್ ಪದವಿ ಪಡೆದರು. 44 ವರ್ಷದ ಪಟೇಲ್ ಅವರು ಟ್ರಂಪ್ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. 2017 ರಲ್ಲಿ ಟ್ರಂಪ್ ಅಧ್ಯಕ್ಷತೆಯ ಕೊನೆಯ ವಾರಗಳಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
ಪಟೇಲ್ ಅಮೆರಿಕದಲ್ಲಿ ಜನಿಸಿದರೂ, ಅವರ ಬೇರುಗಳು ಗುಜರಾತ್‌ಗೆ ಸೇರಿವೆ. ಅವರ ತಾಯಿ ತಾಂಜಾನಿಯಾದವರು. ಅವರ ತಂದೆ ಉಗಾಂಡಾದವರು. 1970 ರ ದಶಕದಲ್ಲಿ, ಅವರ ಕುಟುಂಬ ಕೆನಡಾದಿಂದ ಅಮೆರಿಕಕ್ಕೆ ವಲಸೆ ಬಂದಿತು. ಈ ಹಿಂದೆ ಸಂದರ್ಶನವೊಂದರಲ್ಲಿ “ನಾವು ಗುಜರಾತಿಗಳು” ಎಂದು ಪಟೇಲ್ ಹೆಮ್ಮೆಯಿಂದ ಹೇಳಿದ್ದರು.
https://x.com/ANI/status/1892720038056198556?t=fCH_VzrO_F1kp2MUdCdebg&s=19
Youtube capital ತುಳಸಿ ಗ್ರಾಮ ದೇಶದ ಯೂಟ್ಯೂಬ್ ರಾಜಧಾನಿ! ಇಲ್ಲಿದ್ದಾರೆ ಸಾವಿರಾರು ಯೂಟ್ಯೂಬರ್ಸ್!
Sourav Ganguly car accident ಸೌರವ್ ಗಂಗೂಲಿ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು
Summer health ಬೇಸಿಗೆಯಲ್ಲಿ ಆರೋಗ್ಯವಾಗಿರಲು ಗರ್ಭಿಣಿಯರು ಏನು ಮಾಡಬಹುದು?