Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರೀಲ್ಸ್ ಹುಚ್ಚಿಗೆ ನದಿಗೆ ಜಿಗಿದಿದ್ದ ಯುವ ವೈದ್ಯೆ: 30 ಗಂಟೆ ಬಳಿಕ‌ ಅನನ್ಯಾ ರಾವ್ ಶವ ಪತ್ತೆ
ಕರ್ನಾಟಕಪ್ರಮುಖ

ರೀಲ್ಸ್ ಹುಚ್ಚಿಗೆ ನದಿಗೆ ಜಿಗಿದಿದ್ದ ಯುವ ವೈದ್ಯೆ: 30 ಗಂಟೆ ಬಳಿಕ‌ ಅನನ್ಯಾ ರಾವ್ ಶವ ಪತ್ತೆ

Share
2 Min Read
SHARE

newsics.com

ಕೊಪ್ಪಳ: ಯುವ ವೈದ್ಯೆ ಅನನ್ಯಾ ರಾವ್ ಪ್ರತಿಭಾವಂತ ಭರತನಾಟ್ಯ ಕಲಾವಿದೆ. ಎಂಬಿಬಿಎಸ್ ಓದಿದ್ದ ಆಕೆಗೆ ಎಂಡಿ ಮಾಡುವ ಆಸೆಯಿತ್ತು. ಇದಕ್ಕಾಗಿ ತಯಾರಿ ಕೂಡ ನಡೆಸಿದ್ದಳು. ಆದರೆ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಾಗ ತುಂಗಭದ್ರಾ ನದಿ ಪಾಲಾಗಿದ್ದಾಳೆ.

ಹೈದ್ರಾಬಾದ್ನ ಪ್ರಭಾವಿ ಶಾಸಕ ಮತ್ತು ಮಾಜಿ ಶಾಸಕರ ಸಂಬಂಧಿಯೂ ಆಗಿರುವ ವೈದ್ಯ ವಿದ್ಯಾರ್ಥಿನಿ ಇದೀಗ ನದಿಯಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ.

ಸಾಣಾಪುರ ಬಳಿಯಿರುವ ತುಂಗಭದ್ರಾ ನದಿಯಲ್ಲಿ ಬುಧವಾರ ಹೈದ್ರಾಬಾದ್ ಮೂಲದ ಇಪ್ಪತ್ತೇಳು ವರ್ಷದ ವೈದ್ಯೆ ಅನನ್ಯಾ ರಾವ್ ನೀರುಪಾಲಾಗಿದ್ದಳು. ಮೂರು ದಿನದ ಹಿಂದೆ ಹಂಪಿಗೆ ಪ್ರವಾಸ್ಕಕೆ ಬಂದಿದ್ದ ಅನನ್ಯಾ ರಾವ್, ಬುಧವಾರ ಮುಂಜಾನೆ ಅಂಜನಾದ್ರಿಗೆ ತೆರಳಲು ಸಿದ್ಧವಾಗಿದ್ದಳು. ಆದರೆ ಅದಕ್ಕೂ ಮೊದಲೇ ತುಂಗಭದ್ರಾ ನದಿ ಬಳಿ ಹೋಗಿ, ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿಕೊಂಡು ಬರಲು ಹೋಗಿದ್ದರು. ಹರಿಯುತ್ತಿರುವ ನದಿಯನ್ನು ನೋಡುತ್ತಿದ್ದಂತೆ, ಈಜು ಬರ್ತಿದ್ದ ಅನನ್ಯಾ ರಾವ್‌ಗೆ ನದಿಯಲ್ಲಿ ಈಜುವ ಮನಸ್ಸು ಆಗಿದೆ.

ತಾನು ಬಂಡೆ ಮೇಲಿಂದ ಡೈವ್ ಹೊಡೆದು, ನದಿಯಲ್ಲಿ ಈಜುವುದನ್ನು ವಿಡಿಯೋ ಮಾಡಲು ಸ್ನೇಹಿತರಿಗೆ ಹೇಳಿದ್ದಾಳೆ. ಹಿಂಭಾಗದ ಕಲ್ಲುಬಂಡೆ ಮೇಲಿದ್ದ ಸ್ನೇಹಿತೆ ವಿಡಿಯೋ ಮಾಡಿದ್ದರೆ, ಮುಂಭಾಗದಲ್ಲಿದ್ದ ಸ್ನೇಹಿತ ಕೂಡ ವಿಡಿಯೋ ಮಾಡುತ್ತಿದ್ದ. ಈ ಸಮಯದಲ್ಲಿ ಕಷ್ಟಪಟ್ಟು ನದಿಗೆ ಜಿಗಿದಿದ್ದ ಅನನ್ಯಾ ರಾವ್, ನಾಲ್ಕೈದು ನಿಮಿಷ ಈಜಿದ್ದಾಳೆ. ನಂತರ ಸುಸ್ತಾಗಿ ನೀರಲ್ಲಿ ಮುಳುಗಿದ್ದಾಳೆ. ನೀರಲ್ಲಿ ಮುಳುಗುತ್ತಿರುವ ವಿಡಿಯೋ ಮತ್ತು ನದಿಗೆ ಜಿಗಿಯುವ ವಿಡಿಯೋಗಳು ಇದೀಗ ವೈರಲ್ ಆಗಿವೆ.

ಹೈದ್ರಾಬಾದ್ ಮೂಲದ ಅನನ್ಯಾ ರಾವ್, ಎಂಬಿಬಿಎಸ್ ಪದವೀಧರೆಯಾಗಿದ್ದು, ಎಂಡಿ ಮಾಡಲು ಸಿದ್ದತೆ ನಡೆಸಿದ್ದಳು. ಭರತನಾಟ್ಯ ಕಲಾವಿದೆ ಕೂಡ ಹೌದು. ರೀಲ್ಸ್ ಮಾಡುವ ಹುಚ್ಚು ಕೂಡ ಇತ್ತು. ಹೀಗಾಗಿ ವಿಡಿಯೋ ಮಾಡಲು ಹೇಳಿ ನದಿಗೆ ಜಿಗಿದವಳು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಳು.

ಅನನ್ಯಾ ರಾವ್, ಹೈದ್ರಾಬಾದ್ನ ಮೇದಕ್ ಶಾಸಕ ರೋಹಿತ್ ಮೈನಪಲ್ಲಿ, ಮಲಕಾಜಗಿರಿ ಮಾಜಿ ಶಾಸಕ ರೋಹಿತ್ ಮೈನಪಲ್ಲಿ ಸಂಬಂಧಿಯಾಗಿದ್ದಾರೆ. ನೀರಲ್ಲಿ ಮುಳುಗಿ ನಾಪತ್ತೆಯಾದ ಸುದ್ದಿ ತಿಳಿದು, ಶಾಸಕ ಮತ್ತು ಮಾಜಿ ಶಾಸಕರ ಕುಟುಂಬದವರು ಸ್ಥಳಕ್ಕೆ ಬಂದಿದ್ದರು.

ಬುಧವಾರ ಮುಂಜಾನೆ ಹತ್ತು ಗಂಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಇಂದು ಡ್ರೋಣ್ ಕ್ಯಾಮರಾ ಬಳಸಿ, ಅನೇಕ ಕಡೆ ಹುಡುಕಾಡಿದ್ದಾರೆ. ನದಿಯಲ್ಲಿ ಕಲ್ಲುಬಂಡೆಗಳು, ಗುಹೆಗಳು ಇರೋದರಿಂದ ಎಲ್ಲಾದರೂ ಶವ ಸಿಲುಕಿರುವ ಬಗ್ಗೆ ಹುಡುಕಾಟ ನಡೆಸಿದ್ದರು. ಆದರೆ ಕ್ಯಾಮರಾ ಕಣ್ಣಿಗೆ ಕೂಡ ಕಂಡಿರಲಿಲ್ಲ.

ಬಳ್ಳಾರಿ ಜಿಲ್ಲೆಯ ತೋರಣಗಲ್ನ ಜೆಎಸ್ಡಬ್ಲೂ ಸ್ಟೀಲ್ ತಂಡ, ಗುರುವಾರ ಕಾರ್ಯಾಚರಣೆ ಮಾಡಿದೆ. ಬೋಟ್ನಲ್ಲಿ ಆರು ಜನರ ತಂಡ ಕಾರ್ಯಾಚರಣೆ ನಡೆಸಿದರೆ, ಇನ್ನೊಂದಡೆ ಸ್ಕೂಬಾ ಡೈವಿಂಗ್ ತಂಡ ಕೂಡ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದರು.

ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿದ್ದರಿಂದ ಮತ್ತು ಕಲ್ಲುಬಂಡೆಗಳು ಇರುವುದರಿಂದ ಹುಡುಕಾಟಕ್ಕೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಜಲಾಶಯದಿಂದ ಬಿಡುವ ನೀರನ್ನು ಕಡಿಮೆ ಮಾಡಲಾಗಿತ್ತು. ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆ ನಂತರ ಶವ ಪತ್ತೆ ಆಗಿದೆ.

ಜೀವನದಲ್ಲಿ ಹತ್ತಾರು ಕನಸು ಕಂಡಿದ್ದ ವೈದ್ಯೆ ವಿಡಿಯೋ ಹುಚ್ಚಿಗೆ ನದಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.

Youtube capital ತುಳಸಿ ಗ್ರಾಮ ದೇಶದ ಯೂಟ್ಯೂಬ್ ರಾಜಧಾನಿ! ಇಲ್ಲಿದ್ದಾರೆ ಸಾವಿರಾರು ಯೂಟ್ಯೂಬರ್ಸ್!

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಮುಂದುವರಿದ ಚಿಕಿತ್ಸೆ…sonia gandhi admitted hospital

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ

TAGGED:Young doctor who jumped into the river for reels insane: Ananya Rao's body was found after 30 hours
Share This Article
Facebook Twitter Copy Link Print
Previous Article ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು; ಮುಂದುವರಿದ ಚಿಕಿತ್ಸೆ…sonia gandhi admitted hospital
Next Article Sourav Ganguly car accident ಸೌರವ್ ಗಂಗೂಲಿ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?