newsics.com
ಮಹಾರಾಷ್ಟ್ರ: ಸತಾರಾದ ಸಮರ್ಥ್ ಮಹಾಂಗ್ಡೆ ಎಂಬ ಕಾಲೇಜು ಯುವಕ ಜ್ಯೂಸ್ ಮಾರಿ ಸಂಪಾದನೆ ಮಾಡುತ್ತಿದ್ದ. ಆದರೆ ಕೆಲಸದಲ್ಲಿ ತಲ್ಲೀನನಾಗಿದ್ದ ಈ ಯುವಕನಿಗೆ ಪರೀಕ್ಷೆ ಇದ್ದದ್ದೇ ಮರೆತುಹೋಗಿದೆ. ನಂತರ ಈತ ಮಾಡಿದ್ದೂ ಕೇಳಿದ್ರೆ ಖಂಡಿತ ಬೆರಗು ಆಗೋದು ಖಂಡಿತ.
ಸಮರ್ಥ್ ಮಹಾಂಗ್ಡೆ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿ. ಜ್ಯೂಸ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಪರೀಕ್ಷೆ ಎನ್ನೋದೇ ಮರೆತು ಹೋಗಿದೆ. ಬಳಿಕ ಸ್ನೇಹಿತರು ಕರೆ ಮಾಡಿದಾಗಲೇ ವಿಷಯ ಗೊತ್ತಾಗಿದೆ. ಆದರೆ ಅದಾಗಲೇ ಟೈಮ್ ಆಗಿ ಹೋಗಿದೆ. ಇನ್ನೇನು 15-20 ನಿಮಿಷ ಅಷ್ಟೇ ಇತ್ತು. ರಸ್ತೆ ಮೂಲಕ ಹೋದರೆ ಪರೀಕ್ಷೆ ತಡವಾಗುತ್ತದೆ ಎನ್ನುವುದು ತಿಳಿಯುತ್ತಿದ್ದಂತೆಯೇ, ಕ್ಷಣಮಾತ್ರದಲ್ಲಿ ಬೇರೆಯದ್ದೇ ಯೋಚನೆ ಮಾಡಿದ.
ಇವತ್ತು ಪರೀಕ್ಷೆ ಅಲ್ಲವೇ ಎಂದು ಸ್ನೇಹಿತರು ನೆನಪಿಸಿದಾಗ ಪರೀಕ್ಷೆಗೆ ಇನ್ನೇನು 15-20 ನಿಮಿಷವಷ್ಟೇ ಇದೆ. ಕೊನೆಗೆ ಐದೇ ನಿಮಿಷದಲ್ಲಿ ಕಾಲೇಜಿಗೆ ಹೋಗಿ ಪರೀಕ್ಷೆಗೆ ಹಾಜರಾಗಿದ್ದಾನೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಕಾಲೇಜು ತಲುಪುವಲ್ಲಿ ಸಕ್ಸಸ್ ಕಂಡಿದ್ದಾನೆ.
ಜಿಪಿ ಅಡ್ವೆಂಚರ್ಸ್ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ಸಹಾಯ ಪಡೆದು ಪ್ಯಾರಾಗ್ಲೈಡಿಂಗ್ ಮಾಡುತ್ತಾ ಪರೀಕ್ಷೆಗೆ ಸರಿಯಾದ ಸಮಯದಲ್ಲಿ ತಲುಪಿದ್ದಾನೆ. ಇವನ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಆದರೂ ಪರೀಕ್ಷೆ ಎನ್ನುವುದೇ ಮರೆತ ವಿದ್ಯಾರ್ಥಿಯ ಬಗ್ಗೆಯೂ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೆಲಸದಲ್ಲಿ ಮಗ್ನನಾಗಿರುವ ಆತ, ಕೆಲಸ ಮತ್ತು ಕಾಲೇಜು ಎರಡನ್ನೂ ನಿಭಾಯಿಸುತ್ತಿರುವುದಕ್ಕೂ ಶ್ಲಾಘನೆ ವ್ಯಕ್ತವಾಗಿದೆ.
https://twitter.com/SunnySunnypawan/status/1891327575294722549
Life style ಮಕ್ಕಳಿಗೆ ಮೊಬೈಲ್ ನೀಡುವ ಮೊದಲು ಈ ಸೆಟ್ಟಿಂಗ್ ಆನ್ ಮಾಡಿ!
Kiladi uncle 18 ವರ್ಷದ ಯುವತಿಯನ್ನು ವಿವಾಹವಾಗಿದ್ದ ಕಿಲಾಡಿ ಅಂಕಲ್ ಅರೆಸ್ಟ್