newsics.com
ನವದೆಹಲಿ : ಕಳೆದ ನಾಲ್ಕು ವರ್ಷದಿಂದ ಯುಎಇಯಲ್ಲಿ ಜನಪ್ರಿಯವಾಗುತ್ತಿರುವ ವೇಟ್ ಲಾಸ್ ಚಾಲೆಂಜ್ ಈ ವರ್ಷವೂ ಮರಳಿ ಬಂದಿದ್ದು, ತೂಕ ಇಳಿಸಿಕೊಳ್ಳುವ ಮೂಲಕ ಹಣ ಗೆಲ್ಲುವ ಅವಕಾಶವನ್ನು ಜನತೆಗೆ ನೀಡಲಾಗುತ್ತಿದೆ.
ʻಆರ್‌ಎಕೆ ಬಿಗ್ಗೆಸ್ಟ್ ವೇಟ್ ಲಾಸ್ ಚಾಲೆಂಜ್ʼ (RBWLC) ಅನ್ನು ಘೋಷಣೆ ಮಾಡಿದೆ. ಇದು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಸಮಸ್ಯೆಯಾಗುತ್ತಿರುವ ಬೊಜ್ಜನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಅತಿದೊಡ್ಡ ಉಪಕ್ರಮವಾಗಿದೆ. ಐದನೇ ವರ್ಷದ ಈ ಕಾರ್ಯಕ್ರಮವು, ಕುಟುಂಬಗಳನ್ನು ಉತ್ತಮ ಆರೋಗ್ಯದ ಕಡೆಗೆ ಒಟ್ಟಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಗುರಿ ಹೊಂದಿದೆ.
ಫೆಬ್ರವರಿ 21 ರಿಂದ ಮೇ 22, 2025 ರವರೆಗೆ ನಡೆಯುವ ಈ 12 ವಾರಗಳ ಸ್ಪರ್ಧೆ ದೇಶಾದ್ಯಂತದ ಕುಟುಂಬಗಳನ್ನು ವೇಟ್ ಲಾಸ್ ಚಾಲೆಂಜ್‌ಗೆ ಆಹ್ವಾನಿಸಿದೆ. ಈ ಚಾಲೆಂಜ್ ಅನ್ನು ತೆಗೆದುಕೊಂಡು ಯಾರು ಸಣ್ಣ ಆಗುತ್ತಾರೋ ಅವರು ಪ್ರತಿ ಕೆಜಿ ವೇಟ್‌ಲಾಸ್‌ಗೆ 300 ದಿರ್ಹಾಮ್ ಬಹುಮಾನ ಅಂದರೆ ಸುಮಾರು 7180 ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ.
ಆರೋಗ್ಯದ ಆಂದೋಲನವನ್ನು ಮುನ್ನಡೆಸುತ್ತಿರುವ ಯುಎಇನ ಆರ್‌ಎಕೆ ಆಸ್ಪತ್ರೆ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಮತ್ತೆ ವೇಟ್ ಲಾಸ್ ಚಾಲೆಂಜ್ ಬಂದಿದೆ.
ಆಸಕ್ತ ಕುಟುಂಬಗಳು ರಿಜಿಸ್ಟರ್ ಮಾಡಿಕೊಳ್ಳಲು, ನೋಂದಣಿ ಇದೀಗ ಮುಕ್ತವಾಗಿದೆ ಎಂದು ಆಸ್ಪತ್ರೆ ಇಳಿಸಿದೆ.