newsics.com
ನವದೆಹಲಿ : ಜನದಟ್ಟಣೆಯಲ್ಲಿ ಪ್ರಯಾಗರಾಜ್ಗೆ ಪ್ರಯಾಣಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಾಗುವುದಿಲ್ಲವೇ ಚಿಂತೆ ಬೇಡ , ನಿಮಗಾಗಿ ಡಿಪ್ ಫ್ರಾಮ್ ಹೋಮ್ ಇದೆ ಎಂದು ಬರೆಯಲಾದ ಪೋಸ್ಟರ್ ವೈರಲ್ ಆಗಿದೆ.
ಮೇಳಕ್ಕೆ ತೆರಳಲು ಸಾಧ್ಯವಾಗದೆ ಇರುವ ಜನರಿಗೆ ವಿಶೇಷ ಆಫರ್ ನೀಡಲಾಗಿದೆ. ಜನರು ತಮ್ಮ ಮನೆಗಳಲ್ಲಿ ಆರಾಮವಾಗಿ ಕುಳಿತು ಪುಣ್ಯ ಸ್ನಾನ ಮಾಡಿ, ಆಶೀರ್ವಾದ ಪಡೆಯಬಹುದಾಗಿದೆ. ನಿಮ್ಮ ಫೋಟೋವನ್ನು ನಮಗೆ ವಾಟ್ಸಾಪ್ ಮೂಲಕ ಕಳುಹಿಸಿ. ನಾವು ನಿಮ್ಮ ಫೋಟೋದ ಫೋಟೋಕಾಪಿಯನ್ನು ತೆಗೆದುಕೊಂಡು ನಿಮ್ಮ ಫೋಟೋದೊಂದಿಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತೇವೆ”ಎಂದು ಜಾಹೀರಾತು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಬೆಲೆ ಕೂಡ ನಿಗದಿ ಪಡೆಸಲಾಗಿದ್ದು, 500 ರೂ ನೀಡಿದರೆ ಮನೆಯಲ್ಲಿಯೇ ಕುಳಿತು ತ್ರಿವೇಣಿಯಲ್ಲಿ ಸ್ನಾನ ಮಾಡಬಹುದು. “144 ವರ್ಷಗಳಿಗೊಮ್ಮೆ ಬರುವ ಅವಕಾಶ! ಇದು ದೈವಿಕ ಮಹಾಕುಂಭ ಸ್ನಾನಕ್ಕೆ ನಿಮ್ಮ ಕೊನೆಯ ಅವಕಾಶ. ಇದನ್ನು ತಪ್ಪಿಸಿಕೊಳ್ಳಬೇಡಿ ಎಂದು ಅದರಲ್ಲಿ ಬರೆಯಲಾಗಿದೆ.