newsics.com
ಹಾವೇರಿ: ವ್ಯಕ್ತಿ ಸಾವಿನ ಬಗ್ಗೆ ವೈದ್ಯರು ನೀಡಿದ ವರದಿಯೊಂದಿಗೆ ಮೃತದೇಹ ತರುತ್ತಿದ್ದಾಗ ಆಂಬುಲೆನ್ಸ್‌ನಲ್ಲೇ ಎದ್ದು ಕುಳಿತಿದ್ದ ವ್ಯಕ್ತಿ ಮತ್ತೆ ಮೃತಪಟ್ಟಿದ್ದಾನೆ.
ಸತ್ತು ಬದುಕಿದ್ದ ವ್ಯಕ್ತಿಯೊಬ್ಬ ಇದೀಗ ಮತ್ತೆ ಕೊನೆಯುಸಿರೆಳೆದಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿಷ್ಟಪ್ಪ ಅಶೋಕ ಗುಡಿಮನಿ (45) ಎಂದು ಗುರುತಿಸಲಾಗಿದೆ. ಬಿಷ್ಟಪ್ಪ ಹಲವು ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಒಂದು ವಾರದ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಬಿಷ್ಟಪ್ಪ ಗುಡಿಮನಿ ಸತ್ತಿದ್ದಾನೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು.
ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಬಂಕಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಊರಿಗೆ ವಾಪಸ್ ಬರುತ್ತಿದ್ದ ದಾರಿಯಲ್ಲಿ ಆತನ ಇಷ್ಟದ ಡಾಬಾ ಹೋಟೆಲ್ ಬಂದಿದೆ. ಈ ವೇಳೆ ಬಿಷ್ಟಪ್ಪನ ಪತ್ನಿ ಶೀಲಾ, ನೀನು ಊಟ ಮಾಡೋ ಡಾಬಾ ಬಂತು ನೋಡು, ಊಟ ಮಾಡ್ತಿಯಾ ಎಂದು ಜೋರಾಗಿ ಅಳುತ್ತಿದ್ದಾಗ, ಏಕಾಏಕಿ ಉಸಿರಾಟ ಆರಂಭವಾಗಿ ಬಿಷ್ಟಪ್ಪ ಎದ್ದು ಕುಳಿತಿದ್ದ. ಇದರಿಂದ ಬೆಚ್ಚಿಬಿದ್ದ ಕುಟುಂಬ ಮತ್ತೆ ಬಿಷ್ಟಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.