Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಂಬಳದಿಂದ ದೂರವಾದ 69 ಪದಕ ಗೆದ್ದ ದೂಜ
ಕರ್ನಾಟಕಪ್ರಮುಖ

ಕಂಬಳದಿಂದ ದೂರವಾದ 69 ಪದಕ ಗೆದ್ದ ದೂಜ

Share
1 Min Read
SHARE

newsics.com

ಮಂಗಳೂರು: ಅಲೆ ಬುಡಿಯೆರ್‌ಗೇ ಉದ್ಘಾರದೊಂದಿಗೆ “ಪದವು ಕಾನಡ್ಕ ಫ್ರಾನ್ಸಿಸ್ ಪ್ಲೇವಿ ಡಿ’ಸೋಜೆರ್ನ ಎರ್ಲು’ ಎಂಬ ಕೂಗು ಕೇಳುವಾಗ ಕಂಬಳ ಅಭಿಮಾನಿಗಳ ಕಿವಿ ನೆಟ್ಟಗಾಗುತ್ತದೆ. ಯಾಕೆಂದರೆ ಅಲ್ಲಿ “ದೂಜ’ ಇದ್ದಾನ ಎಂಬ ಕುತೂಹಲ.

ಆದರೆ ಒಂದೆರಡು ವರ್ಷದಿಂದ ಅವರಿಗೆ ನಿರಾಸೆಯೇ ಆಗಿದೆ. ಅಂದಹಾಗೆ, ಈಗ ದೂಜ ಆರೋಗ್ಯವಾಗಿದ್ದರೂ ಕಂಬಳ ಕರೆಯ ಓಟಕ್ಕೆ ಮಾತ್ರ ಮುಕ್ತಾಯ ಹಾಡಿದ್ದಾನೆ. ಕಂಬಳ ಓಟದಲ್ಲಿ 69 ಮೆಡೆಲ್ ಪಡೆದು ದಾಖಲೆ ಮಾಡಿದ ಕೋಣ ದೂಜ 2 ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ.

ಮಂಗಳೂರಿನ ಶಕ್ತಿನಗರದ ಪದವು ಕಾನಡ್ಕ ದೂಜ ಎಂಬ ಕೋಣವು ಕಂಬಳದಲ್ಲಿ ಕೇವಲ 8 ವರ್ಷಗಳಲ್ಲಿ 6 ಬಾರಿ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಗಿದೆ. ದೂಜನ ಓಟವನ್ನು ಕಂಡು ಕಂಬಳ ಲೋಕವೇ “ಭೇಷ್’ ಅನ್ನುವಂತಿತ್ತು. ನಿರೀಕ್ಷೆಗೂ ಮೀರಿದ ಓಟದ ಸಾಧಕ ದೂಜ ಅನಾರೋಗ್ಯದಿಂದ ಒಂದೆರಡು ವರ್ಷಗಳಿಂದ ಓಟಕ್ಕೆ ಬಂದಿಲ್ಲ. ಸದ್ಯದ ಪ್ರಕಾರ ಮುಂದೆ ಕಂಬಳ ಕರೆಗೆ ಬರುವುದೂ ಕಷ್ಟ.
ಆರೋಗ್ಯವಿದ್ದರೆ ಕೋಣಗಳು ಸರಾಸರಿ 20ವರ್ಷ ಪ್ರಾಯದವರೆಗೆ ಕಂಬಳದಲ್ಲಿ ಓಡುತ್ತವೆ. ಆದರೆ ದೂಜನಿಗೆ ಎರಡು ವರ್ಷಗಳ ಹಿಂದೆ ಆರೋಗ್ಯ ಕೈಕೊಟ್ಟಿತ್ತು. ಎದ್ದು ನಿಲ್ಲಲಾರದಷ್ಟು ಸಹ ಅಶಕ್ತನಾದ. ಬಳಿಕ‌ ನಡೆದ ಚಿಕಿತ್ಸೆಯಿಂದ ಆರೋಗ್ಯವಂತನಾದರೂ ಓಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ಮುಂದೆ ಆತ ಕಂಬಳ ಕರೆಗೆ ಇಳಿಯುವುದು ಸ್ವಲ್ಪ ಕಷ್ಟವೇ ಆಗಿದೆ.
ಶಕ್ತಿನಗರ ಪದವು – ಕಾನಡ್ಕದ ಯಜಮಾನರು ದೂಜ ಕೋಣವನ್ನು ಅಳದಂಗಡಿ ರವಿಯವರಿಂದ ಖರೀದಿಸಿದ್ದರು. ಪದವು ಕಾನಡ್ಕಕ್ಕೆ ಬರುವಾಗ 2 ವರ್ಷದ ಮರಿ ಕೋಣವಾಗಿದ್ದ ದೂಜನಿಗೆ ಇದೀಗ 16ರ ಪ್ರಾಯ. ಪದವು – ಕಾನಡ್ಕಕ್ಕೆ ಬಂದ ಬಳಿಕವೇ ದೂಜ ಕಂಬಳಕ್ಕೆ ತಯಾರಾಗಿದ್ದು. ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜರ ಹೆಸರಿನಲ್ಲಿ ದೂಜನನ್ನು ಕಂಬಳ ಕರೆಯಲ್ಲಿ ಓಡಿಸಲಾಗುತ್ತಿತ್ತು. ತಂದೆ ಫ್ರಾನ್ಸಿಸ್ ಅವರ ನಿಧನದ ಬಳಿಕ ಮೂವರು ಮಕ್ಕಳಾದ ಡೋಲ್ಫಿ ಡಿಸೋಜ, ಡೆರಿಕ್ ಡಿಸೋಜ ಹಾಗೂ ನಾಬರ್ಟ್ ಡಿಸೋಜರು ತಾಯಿ ಫ್ಲೇವಿ ಡಿಸೋಜರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದಾರೆ

TAGGED:Doujanhas a health problemwho won 69 medals in carpet
Share This Article
Facebook Twitter Copy Link Print
Previous Article Marriage at Rashtrapati Bhavan: ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಿಆರ್‌ಪಿಎಫ್ ಅಧಿಕಾರಿಗಳು
Next Article Namma metro ಮೆಟ್ರೋ ದರ ಬದಲಾವಣೆ, ಶೀಘ್ರವೇ ಪರಿಷ್ಕೃತ ಪಟ್ಟಿ ಪ್ರಕಟ: BMRCL

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?