newsics.com
ಬಹುಭಾಷಾ ನಟಿ ಭಾನುಪ್ರಿಯಾ ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅವರು ಒಂದು ಕಾಲದ ಬಹುಬೇಡಿಕೆಯ ಹೀರೋಯಿನ್ ಆಗಿದ್ದರು. ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಿ ಫೇಮಸ್ ಆಗಿದ್ದರು. ಕನ್ನಡದ ‘ಸಿಂಹಾದ್ರಿಯ ಸಿಂಹ’, ‘ರಸಿಕ’, ‘ದೇವರ ಮಗ’, ‘ಕದಂಬ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈಗ ಅವರ ಬದುಕಿನ ಬಗ್ಗೆ ಕೆಲವು ಅಚ್ಚರಿಯ ವಿಚಾರಗಳ ಬಹಿರಂಗ ಆಗಿವೆ.
ಭಾನುಪ್ರಿಯಾ ಅವರು ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ.ಮೆಮೊರಿ ಲಾಸ್ ಆಗುತ್ತಿರುವುದರಿಂದ ಅವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಗಂತ ಇದು ಗಾಸಿಪ್ ಅಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ವತಃ ಭಾನುಪ್ರಿಯಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಒಂದು ಕಾಲದಲ್ಲಿ ಹೀರೋಯಿನ್ ಆಗಿದ್ದ ಭಾನುಪ್ರಿಯಾ ಅವರು ನಂತರದ ದಿನಗಳಲ್ಲಿ ಪೋಷಕ ಪಾತ್ರಗಳನ್ನು ಒಪ್ಪಿಕೊಂಡರು. ಆಗಲೂ ಅವರು ಬ್ಯುಸಿ ನಟಿಯಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚಾಗಿ ಯಾವುದೇ ಸಿನಿಮಾಗಳಿಗೂ ಸಹಿ ಮಾಡುತ್ತಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಅವರು ತಿಳಿಸಿದ್ದಾರೆ. ನೆನಪಿನ ಶಕ್ತಿ ಕುಂದುತ್ತಿರುವ ಕಾರಣದಿಂದ ಡೈಲಾಗ್ಗಳನ್ನು ಹೇಳಲು ಅವರಿಗೆ ಆಗುತ್ತಿಲ್ಲ. ಇದರಿಂದ ಸಿನಿಮಾದಲ್ಲಿ ನಟಿಸುವುದು ಭಾನುಪ್ರಿಯಾ ಅವರಿಗೆ ಕಷ್ಟ ಆಗುತ್ತಿದೆ.
ಭಾನುಪ್ರಿಯಾ ಅವರು ಅತ್ಯುತ್ತಮ ಡ್ಯಾನ್ಸರ್. 80ರ ದಶಕದ ಸಿನಿಮಾಗಳಲ್ಲಿ ಅವರು ನೃತ್ಯದ ಮೂಲಕ ಗಮನ ಸೆಳೆದಿದ್ದರು. ಪ್ರಸಿದ್ಧ ಕೂಚುಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ.
https://www.instagram.com/p/DF4GgBdv-f8/?igsh=eXI5Y2FnZ3lrMnNo
Heart attack ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಕುಸಿದು ಕೊನೆಯುಸಿರೆಳೆದ ಯುವತಿ, ವೈರಲ್ ವಿಡಿಯೋ ನೋಡಿ
Tirupati Laddu: ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ನಾಲ್ವರು ಅರೆಸ್ಟ್