newsics.com
ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಮನೆಯಲ್ಲಿ ಸಾಲು ಸಾಲು ಮದುವೆ ಸಂಭ್ರಮ ಮನೆ ಮಾಡಿದೆ.
ನಿನ್ನೆ ನಟ ರಾಣಾ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ವಿವಾಹದ ಸಂಭ್ರಮದ ಕಳೆಗಟ್ಟಿತ್ತು. ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಣಾ ಹಾಗೂ ರಕ್ಷಿತಾ ಆರತಕ್ಷತೆ ನಡೆಯುತ್ತಿದೆ.
ಈಗಾಗಲೇ ರಾಣಾ, ರಕ್ಷಿತಾ ಆರತಕ್ಷತೆಗೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಬಂದಿದ್ದಾರೆ. ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿಂದ ಹೊರ ಬಂದ ಮೇಲೆ ಮೊದಲ ಶುಭ ಕಾರ್ಯಕ್ಕೆ ದರ್ಶನ್ ಹಾಜರಾಗಿದ್ದಾರೆ.
ವೇದಿಕೆಗೆ ಬಂದ ನಟ ದರ್ಶನ್ ಅವರ ಆರ್ಶೀವಾದವನ್ನು ರಕ್ಷಿತಾ, ರಾಣಾ ಪಡೆದುಕೊಂಡಿದ್ದಾರೆ.