newsics.com
ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸದ್ಯ ವ್ಯಾಲೆಂಟೈನ್ಸ್ ಡೇ ವಾರ ಆರಂಭವಾಗಿದೆ. ಈ ಹಿನ್ನೆಲೆ ಚಾಕೊಲೇಟ್ ಗಳ ಬೆಲೆ ಎಷ್ಟು ಅಂತ ಶಾಕ್ ಆಗುತ್ತದೆ.
ಆದ್ರೆ, ಪ್ರಪಂಚದ ಅತ್ಯಂತ ದುಬಾರಿ ಚಾಕೊಲೇಟ್ ಬಗ್ಗೆ ನೀವು ತಿಳಿಲೇಬೇಕು. ಇದರ ಹೆಸರು ಟೋಕ್ ಅಂತಾ, ಇದನ್ನು ಪ್ರಪಂಚದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಚಾಕೊಲೇಟ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಈಕ್ವೆಡಾರ್‌ನಲ್ಲಿ ತಯಾರಾಗುವ ಹೈ-ಎಂಡ್ ಚಾಕೊಲೇಟ್ ಬ್ರ್ಯಾಂಡ್. ಇನ್ನ ಇದನ್ನ ಕೋಕೋ ಬೀನ್ಸ್‌ಗಳಿಂದ ತಯಾರಿಸಲಾಗುತ್ತದೆ. ಈ ಚಾಕೊಲೇಟ್ ತಯಾರಿಕೆಯಲ್ಲಿ 100% ಶುದ್ಧ ಕೋಕೋ ಬೀನ್ಸ್‌ಗಳನ್ನು ಬಳಸಲಾಗುತ್ತದೆ. ಅರ್ರಿಬಾ ನಸಿನೊಯಲ್ ಎಂಬ ಬೀನ್ಸ್‌ಗಳನ್ನು ಇದರ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಈ ಚಾಕೊಲೇಟ್ ಅನ್ನು ವೈನ್, ವಿಸ್ಕಿಗಳಂತೆ ಕೆಲವು ವರ್ಷಗಳ ಕಾಲ ಮರದ ಬ್ಯಾರೆಲ್‌ಗಳಲ್ಲಿ ಹಣ್ಣಾಗಿಸಲಾಗುತ್ತದೆ. ಈ ಚಾಕೊಲೇಟ್‌ನಲ್ಲಿ ಯಾವುದೇ ರಾಸಾಯನಿಕಗಳು ಅಥವಾ ಸಕ್ಕರೆಯನ್ನು ಬಳಸುವುದಿಲ್ಲ. ಇದನ್ನ ಚಿನ್ನದ ಮುದ್ರಿತ ವಿನ್ಯಾಸದೊಂದಿಗೆ ನೀಡಲಾಗುತ್ತದೆ. ಈ ಚಾಕೊಲೇಟ್‌ನ ಬೆಲೆ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸುಮಾರು 50 ಗ್ರಾಂ ಚಾಕೊಲೇಟ್ ಬೆಲೆ ಸುಮಾರು 60 ರೂ. ಇರುತ್ತದೆ.
ಈ ಚಾಕೊಲೇಟ್‌ನ ಬೆಲೆ ಏಕೆ ಇಷ್ಟು ಹೆಚ್ಚು ಎಂಬ ಪ್ರಶ್ನೆ ಬರುವುದು ಸಹಜ. ಪ್ರೀಮಿಯಂ ಪ್ಯಾಕೇಜ್, ಐಷಾರಾಮಿ ನೋಟದೊಂದಿಗೆ ಪ್ಯಾಕೇಜ್ ಮಾಡಲಾಗುತ್ತದೆ. ಈ ಚಾಕೊಲೇಟ್ ಅನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಹಳೆಯ ವೈನ್, ಸ್ಕಾಚ್ ನಿಧಾನವಾಗಿ ಕರಗಿ ಒಂದು ರೀತಿಯ ಅನುಭವವನ್ನು ನೀಡುತ್ತದೆ.