Newsics.com
ಬೆಂಗಳೂರು:ಜಾರ್ಖಂಡ್ನ ರಾಂಚಿ ಮೂಲದ ಉದ್ಯಮಿ ಜಸ್ಮಾವುದ್ದೀನ್ ಎಂಬಾತ ಜೀವನೋಪಾಯಕ್ಕೆಂದು ಅಪಾರ್ಟ್ಮೆಂಟ್ನಲ್ಲಿ ಕ್ಲೌಡ್ ಕಿಚನ್ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದರಿಂದ ಬಾಲಕನೋರ್ವನನ್ನು ಅಪಹರಿಸಿದ್ದಾನೆ. ಹಣಕ್ಕಾಗಿ ಬಾಲಕನ ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ.
23 ವರ್ಷದ ಜಸ್ಮಾವುದ್ದೀನ್ ಶೇಖ್ 9 ವರ್ಷದ್ದ ಬಾಲಕನನ್ನು ಅಪಹರಿಸಿ ತನ್ನ ಅಪಾರ್ಟ್ ಮೆಂಟ್ನಲ್ಲಿ ಬಚ್ಚಿಟ್ಟಿದ್ದ. ನಂತರ ಬಾಲಕನ ಪೋಷಕರಿಗೆ ಮೊಬೈಲ್ ಕರೆ ಮಾಡಿ 10 ಲಕ್ಷ ರೂ.ನೀಡಿದರೆ ಮಗನನ್ನು ಒಪ್ಪಿಸುತ್ತೇನೆ ಎಂದು ಬೇಡಿಕೆ ಇರಿಸಿದ್
ಕೆಲವು ಗಂಟೆಗಳ ನಂತರ ಬಾಲಕನ ತಂದೆ ಕರೆ ಮಾಡಿ 5 ಲಕ್ಷ ರೂ. ಸಿದ್ದಪಡಿಸಿರುವುದಾಗಿ ತಿಳಿಸುತ್ತಾರೆ. ಆಗ ಅಪಹರಣಕಾರ ತನ್ನ ಅಪಾರ್ಟ್ ಮೆಂಟ್ ಸಮೀಪವಿರುವ ಅಂಗಡಿಯೊಂದರ ಬಳಿ ಹಣದ ಬ್ಯಾಗ್ ಇಡಲು ತಿಳಿಸುತ್ತಾನೆ. ಹಣದ ಬ್ಯಾಗ ಇಟ್ಟಿದ್ದ ಅಂಗಡಿ ಬಳಿ ಅಪಹರಣಕಾರ ಆಗಮಿಸಿದಾಗ ಮಫ್ತಿಯಲ್ಲಿದ್ದ ಪೊಲೀಸರು ಈತನನ್ನು ಬಂಧಿಸುತ್ತಾರೆ
ಜಾರ್ಖಂಡ್ ನ ರಾಂಚಿ ಮೂಲದ ಈ ಉದ್ಯಮಿ ಜಸ್ಮಾವುದ್ದೀನ್ 9 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದ. ಜೀವನೋಪಾಯಕ್ಕಾಗಿ ತನ್ನ ಅಪಾರ್ಟ್ ಮೆಂಟ್ ನಲ್ಲಿಯೇ ಕ್ಲೌಡ್ ಕಿಚನ್ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದ ಶೇಖ್ ನಷ್ಟವನ್ನು ತುಂಬಿಕೊಳ್ಳಲು ಅಪಹರಣದ ಸೂತ್ರವನ್ನು ಹೆಣೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.