newsics.com
ನವದೆಹಲಿ: ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸ್ಟಾರ್ಟ್ ಅಪ್ಗಳು ಮತ್ತು ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ.
ಅಷ್ಟೇ ಅಲ್ಲದೇ,ಈ ಬಾರಿ ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ. ಹೊಸ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡಲು ಇಚ್ಚಿಸುವವರು 12 ಲಕ್ಷದ ಆದಾಯ ತೆರಿಗೆ ರಿಯಾಯಿತಿ ಜೊತೆಗೆ 75 ಸಾವಿರ ರೂ ಸ್ಟ್ಯಾಡಂರ್ಡ್ ಡಿಡಕ್ಷನ್ ಸಿಗಲಿದೆ. ಇದರಿಂದ 12.75 ಸಾವಿರ ರೂವರೆಗೆ ಜಿರೋ ತೆರಿಗೆ ಇರಲಿದೆ.
ರಫ್ತು ಮಾಡುವ MSME ಉದ್ಯಮಗಳಿಗೆ ₹20 ಕೋಟಿ ವರೆಗೆ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ. ಇದು ಸಣ್ಣ ಉದ್ಯಮಗಳು ಗ್ಲೋಬಲ್ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ವಿಸ್ತರಿಸಲು ಸಹಾಯಕವಾಗಿದೆ. ಸ್ಟಾರ್ಟ್ ಅಪ್ಗಳಿಗೆ ಸಂಬಂಧಿಸಿದಂತೆ 27 ವಿವಿಧ ವಲಯಗಳಲ್ಲಿ ಸಾಲ ಸೌಲಭ್ಯಗಳನ್ನು ಅನುಮೋದಿಸಲಾಗಿದೆ. ಇದರೊಂದಿಗೆ, ಸ್ಟಾರ್ಟ್ ಅಪ್ಗಳ ಸಹಾಯಧನ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ.
ಸ್ಟಾರ್ಟ್ ಅಪ್ಗಳಿಗೆ ನೀಡುವ ಸಾಲದ ಮಿತಿಯನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಸಲಾಗಿದೆ. ಇದರ ಜೊತೆಗೆ, SC/ST ಸಮುದಾಯದ 5 ಲಕ್ಷ ಮಹಿಳಾ ಉದ್ಯಮಿಗಳಿಗೆ ವಿಶೇಷ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಕ್ರಮಗಳು ಸಾಮಾಜಿಕ-ಆರ್ಥಿಕ ಸಮತೋಲನ ಮತ್ತು ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತವೆ.
ಪಾದರಕ್ಷೆ ಮತ್ತು ಚರ್ಮ ಉದ್ಯಮಗಳನ್ನು ಪ್ರೋತ್ಸಾಹಿಸಲು ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಇದು 22 ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗುವುದು. ಇದರ ಜೊತೆಗೆ, ಈ ಕ್ಷೇತ್ರಗಳು ₹4 ಲಕ್ಷ ಕೋಟಿ ವಹಿವಾಟಿನ ಗುರಿಯನ್ನು ಹೊಂದಿವೆ. ಮತ್ತೊಂದು ಮುಖ್ಯ ಘೋಷಣೆಯೆಂದರೆ, ಭಾರತದ ಆಟಿಕೆ ಉದ್ಯಮವನ್ನು ಬಲಪಡಿಸಲು ‘ಆಟಿಕೆಗಳ ರಾಷ್ಟ್ರೀಯ ಕ್ರಿಯಾ ಯೋಜನೆ’. ಇದು ದೇಶೀಯ ಉತ್ಪಾದನೆ ಮತ್ತು ಗ್ಲೋಬಲ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಉದ್ದೇಶಿಸಿದೆ.