newsics.com
ಭೋಪಾಲ್ : ಕುಡಿದ ಮತ್ತಿನಲ್ಲಿ ಯುವಕನೊಬ್ಬ ಮೊಬೈಲ್ ಟವರ್ ಮೇಲೇರಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಬರ್ಖೇಡಿ ಪ್ರದೇಶದಲ್ಲಿ ನಡೆದಿದೆ.
ಅದೃಷ್ಟವಶಾತ್, ಆ ವ್ಯಕ್ತಿಗೆ ಯಾವುದೇ ಅಪಾಯ ಆಗಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ರಕ್ಷಿಸಿದರು. ಆ ವ್ಯಕ್ತಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಮಾಹಿತಿಯ ಪ್ರಕಾರ, ಯುವಕನನ್ನು ಭೋಪಾಲ್ನ ಐಶ್ಬಾಗ್ ಪ್ರದೇಶದ ನಿವಾಸಿ 33 ವರ್ಷದ ವಿವೇಕ್ ಠಾಕೂರ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಲು ಪ್ರಾರಂಭಿಸಿದರು. ಅವನು ಏರುವುದನ್ನು ನೋಡಿ ಟವರ್ ಸುತ್ತಲೂ ದೊಡ್ಡ ಜನಸಮೂಹ ಜಮಾಯಿಸಿತು. ನಂತರ ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
https://www.instagram.com/reel/DFfBrU2CldR/?igsh=dmdiZzY1cDNhd3Bi