Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health care ಮುಟ್ಟಿಗೂ ಮೊದಲು ಕಾಡುವ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ ಸಾಕು
ಆರೋಗ್ಯಲೈಫ್‌ಸ್ಟೈಲ್

Health care ಮುಟ್ಟಿಗೂ ಮೊದಲು ಕಾಡುವ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ ಸಾಕು

Share
2 Min Read
SHARE

newsics.com
ಹೆಣ್ಣುಮಕ್ಕಳು ಪ್ರತಿ ತಿಂಗಳು ನೋವು ಅನುಭವಿಸುವುದು ಅನಿವಾರ್ಯ. ಮುಟ್ಟಿನ ನೋವು ಸುಮಾರು 7 ರಿಂದ 10 ದಿನಗಳವರೆಗೆ ಕಾಡುತ್ತದೆ. ಮುಟ್ಟಿನ ಆರಂಭಕ್ಕೂ ವಾರ ಮೊದಲೇ ಕೆಲವರಿಗೆ ನೋವು ಪ್ರಾರಂಭವಾಗುತ್ತದೆ. ಇದನ್ನು ಪಿಎಂಎಸ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಅಂದರೆ ಪಿರಿಯಡ್ಸ್ ಆಗುವ ಮೊದಲು ಕಂಡುಬರುವ ಲಕ್ಷಣಗಳು.

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ ಕಚೇರಿಗೆ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆಯುವವರಿದ್ದಾರೆ.

ಮುಟ್ಟಿನ ಸಮಯದಲ್ಲಿ ಹೊಟ್ಟೆ, ಕಿಬ್ಬೊಟ್ಟೆ, ಕಾಲು, ತಲೆ ನೋವು ಸಾಮಾನ್ಯ. ಕೆಲವರಿಗೆ ಇದ್ರ ಪ್ರಮಾಣ ಹೆಚ್ಚಿರುತ್ತದೆ. ಮತ್ತೆ ಕೆಲವರಿಗೆ ಕಡಿಮೆಯಿರುತ್ತದೆ. ಈ ನೋವಿನಿಂದ ಮುಕ್ತಿ ಪಡೆಯಲು ಅನೇಕ ಮಹಿಳೆಯರು ನೋವಿನ ಮಾತ್ರೆಗಳನ್ನು ಸೇವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ನೋವಿನ ಮಾತ್ರೆ ಸೇವನೆಯಿಂದ ದೇಹದಲ್ಲಿರುವ ಒಳ್ಳೆ ಬ್ಯಾಕ್ಟಿರಿಯಾ ಕೂಡ ಸಾವನ್ನಪ್ಪುತ್ತದೆ. ಇದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ಮೂತ್ರಪಿಂಡ ಸಮಸ್ಯೆ, ಪಿತ್ತಜನಕಾಂಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮುಟ್ಟಿನ ಸಮಯದಲ್ಲಿ ಬರುವ ರಕ್ತದ ವಾಸನೆಯನ್ನು ಕಡಿಮೆ ಮಾಡಲು ಅನೇಕರು ಸೆಂಟ್ ಬಳಸ್ತಾರೆ. ಆದ್ರೆ ಸೆಂಟ್ ಬಳಕೆ ಅಪಾಯ. ಇದ್ರಿಂದ ಕೆಲ ಸೋಂಕುಗಳು ಹರಡುವ ಸಾಧ್ಯತೆಯಿರುತ್ತದೆ. ಚರ್ಮಕ್ಕೆ ಈ ಸೋಂಕು ಹಾನಿಯುಂಟು ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ನೋವು, ಕೆಲಸದ ಒತ್ತಡದ ಮಧ್ಯೆ ಕೆಲವರು ಆಹಾರ ಸೇವನೆ ಬಿಡ್ತಾರೆ. ಆಹಾರ ಸೇವನೆ ಬಿಡುವುದು ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆ.

ಮುಟ್ಟಿನ ಸಮಯದಲ್ಲಿ ನ್ಯಾಪ್ಕಿನ್ ಬದಲಾವಣೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅನೇಕರು ಒಂದು ದಿನಗಳ ಕಾಲ ಒಂದೇ ನ್ಯಾಪ್ಕಿನ್ ಬಳಸ್ತಾರೆ. ಇದು ಅನೇಕ ಸೋಂಕು ಹರಡಲು ಕಾರಣವಾಗುತ್ತದೆ. ಮೂರು ಗಂಟೆಗೊಮ್ಮೆ ನ್ಯಾಪ್ಕಿನ್ ಬದಲಾಯಿಸುವ ರೂಢಿ ಇಟ್ಟುಕೊಳ್ಳಬೇಕು.

ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ರೆಯಾನ್ ಹಾಗೂ ಹತ್ತಿಯಿಂದ ಮಾಡಲಾಗುತ್ತದೆ. ರೆಯಾನ್ ಮಿಶ್ರಿತ ಹತ್ತಿಯ ಪ್ಯಾಡ್ ನಲ್ಲಿ ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸಲಾಗಿರುತ್ತದೆ. ಇದು ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಾವಯವ ಹತ್ತಿಯಿಂದ ಮಾಡಿದ ಪ್ಯಾಡ್ ಬಳಕೆ ಮಾಡಬೇಕು.

ಮುಟ್ಟಿನ ವೇಳೆ ವ್ಯಾಯಾಮವನ್ನು ಅನೇಕರು ಮಾಡುವುದಿಲ್ಲ. ಸದಾ ಹಾಸಿಗೆ ಮೇಲೆ ಮಲಗಿರುತ್ತಾರೆ. ಇದು ಸರಿಯಲ್ಲ. ಮುಟ್ಟಿನ ವೇಳೆ ವೈದ್ಯರ ಸಲಹೆ ಪಡೆದು ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.

TAGGED:Suffering from premenstrual cramps? Just do it this way
Share This Article
Facebook Twitter Copy Link Print
Previous Article Viral video ಕುಡಿದ ಮತ್ತಿನಲ್ಲಿ ‘ಮೊಬೈಲ್ ಟವರ್’ ಏರಿದ ಭೂಪ: ಆಗಿದ್ದೇನು..?
Next Article Budget 2025 Farming Sector:  ಬಜೆಟ್‌ ಆರಂಭದಲ್ಲೇ ಅನ್ನದಾತರಿಗೆ ಸಿಕ್ತು ಬಂಪರ್‌ ಸುದ್ದಿ

Popular Posts

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

You Might Also Like

ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read
ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?