newsics.com
ಉತ್ತರ ಪ್ರದೇಶ: ಮುಜಾಹಿದ್ ಎಂಬ ಯುವಕನೊಬ್ಬ ರಾತ್ರಿ ಬೆಳಗಾಗುವುದರೊಳಗೆ ಯುವತಿಯಾಗಿ ಬದಲಾಗಿದ್ದಾನೆ.
ಉತ್ತರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮುಜಾಹಿದ್ ಎಂಬ 20 ವರ್ಷದ ಯುವಕ ಇಂತಹ ಘೋರ ಕೃತ್ಯಕ್ಕೆ ಒಳಗಾದ ವ್ಯಕ್ತಿ.
ಈತನಿಗೆ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಮುಜಾಫರ್ ನಗರದ ಸ್ಥಳೀಯ ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಸೇರಿಕೊಂಡು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮೋಸ ಮಾಡಿದ್ದಾನೆ.
ಇದು ಆತನ ಜೀವನಕ್ಕೊಂದು ಭಯಾನಕ ತಿರುವು ನೀಡಿದಂತಾಗಿದೆ. ಈ ಪ್ರಕರಣದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಭಯಾನಕ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮುಜಾಹಿದ್ ಸಂಜಕ್ ಗ್ರಾಮದ ವ್ಯಕ್ತಿಯಾಗಿದ್ದ. ಓಂಪ್ರಕಾಶ್ ಎಂಬ ವ್ಯಕ್ತಿ ಮನ್ಸೂರ್ ಪುರದ ಬೇಗ್ರಾಜ್‌ಪುರ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಮುಜಾಹಿದ್‌ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದಾನೆ. ಆತನ ಮಾತು ಕೇಳಿ ವೈದ್ಯರು ಮುಜಾಹಿದ್‌ನ ಜನನಾಂಗವನ್ನು ತೆಗೆದುಹಾಕಿ ಬಲವಂತವಾಗಿ ಲಿಂಗ ಬದಲಾವಣೆ ಮಾಡಿದ್ದಾರೆ.
ಮುಜಾಹಿದ್‌ಗೆ ವೈದ್ಯಕೀಯ ಸಮಸ್ಯೆ ಇದೆ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ಕಿರುಕುಳ ನೀಡುತ್ತಿದ್ದ. ತನ್ನನ್ನು ಆಸ್ಪತ್ರೆಗೆ ಕರೆತಂದು ನಂತರ ಅರವಳಿಕೆ ಇಂಜೆಕ್ಷನ್ ನೀಡಿ ಲಿಂಗ ಬದಲಾವಣೆಯ ಸರ್ಜರಿ ಮಾಡಿದ್ದಾರೆ ಎಂದು ಮುಜಾಹಿದ್ ಆರೋಪಿಸಿದ್ದಾನೆ.
ಅಷ್ಟೇ ಅಲ್ಲ, ಇನ್ನು ಮುಂದೆ ತನ್ನ ಕುಟುಂಬದವರು ತನ್ನನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ತನ್ನ ಜತೆ ಇರುವಂತೆ, ತನ್ನನ್ನೇ ಮದುವೆಯಾಗುವಂತೆ ಓಂಪ್ರಕಾಶ್ ಬೆದರಿಕೆ ಹಾಕಿರುವುದಾಗಿ ಮುಜಾಹಿದ್ ತಿಳಿಸಿದ್ದಾನೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ದರ್ಶನ್ ಸೇರಿ ನಾಲ್ವರು ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಸೇರಿ 10 ಮಂದಿಗೆ ಜೈಲು
ಹವಾಮಾನದಲ್ಲಿ ಭಾರೀ ಬದಲಾವಣೆ: ರಾಜ್ಯದಲ್ಲಿ ಹೆಚ್ಚಾಯ್ತು ವೈರಲ್ ಸೋಂಕು!