newsics.com
ಬೆಂಗಳೂರು: ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದೆ. ಆ ಮೂಲಕ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಏರುತ್ತಿವೆ. ಹೀಗಾಗಿ ಮಾರುಕಟ್ಟೆಗೆ ಹೋಗಬೇಕೆಂದರೆ ಚೀಲ ತುಂಬಾ ಹಣ ತುಂಬಿಕೊಂಡು ಜೇಬಿನಲ್ಲಿ ತರಕಾರಿ ತರುವ ಸ್ಥಿತಿ ಎದುರಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ಬಂದ ಬೆಳೆಯೂ ಹಾಳಾಗುತ್ತಿದೆ. ಜತೆಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯದ ಕಾರಣ ಬೆಲೆ ಏರಿಕೆಯಾಗಿದೆ.
ಹೀರೇಕಾಯಿ ಕೆಜಿಗೆ 120 ರೂ., ಸೌತೆಕಾಯಿ 120 ರೂ., ಚೌಳಿಕಾಯಿ 80 ರೂ., ಬೀನ್ಸ್ 160 ರೂ., 1 ಮೂಲಂಗಿಗೆ 10 ರೂ. ಹೀಗೆ ತರಕಾರಿ ದರ ಏರುಮುಖದಲ್ಲಿ ಸಾಗಿದೆ.
ಶನಿವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿದ್ದು, ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆಗಳು ಮತ್ತಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೂ ಸರ್ಕಾರ ಸಮ್ಮತಿ