Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ಕುಣಿಕೆ ಬಿಗಿದು ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಸಾವು
ದೇಶ

ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ಕುಣಿಕೆ ಬಿಗಿದು ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಸಾವು

Share
1 Min Read
SHARE

newsics.com

ವಾರಂಗಲ್: ಸಾವಿಗೆ ಶರಣಾಗುವ ವಿಡಿಯೋ ಮಾಡಲು ಹೋದ ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಓರ್ವ ಆಕಸ್ಮಿಕವಾಗಿ ನೇಣು ಬಿಗಿದು ಮೃತಪಟ್ಟ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ.

ಅಜಯ್ ಮೃತ ಯುವಕ. ಜೂನ್ 18ರಂದು ಈ ಘಟನೆ ನಡೆದಿದ್ದು, ಮೃತ ಅಜಯ್ ತಾಯಿ ದೇವಮ್ಮ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ 23 ವರ್ಷದ ಕಂಡಕಟ್ಲ ಅಜಯ್ ಸ್ಥಳೀಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬಿಡುವಿನ ಸಮಯದಲ್ಲಿ ರೀಲ್ಸ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಅದರಂತೆ ಅಂದು ಹೋಟೆಲ್‌ನಿಂದ ಕೆಲಸ ಮುಗಿಸಿ ಮಲ್ಲಂಪಲ್ಲಿ ರಸ್ತೆಯಲ್ಲಿರುವ ತನ್ನ ಪುಟ್ಟ ಮನೆಗೆ ಬಂದ ಅಜಯ್ ಮಂಗಳವಾರ ರಾತ್ರಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಇದೇ ಆತನ ಕೊನೆ ವಿಡಿಯೋ ಆಗಿ ಬದಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಜಯ್ ತನ್ನ ಮೊಬೈಲ್ ಫೋನ್ ಅನ್ನು ಫ್ರಿಡ್ಜ್ ಮೇಲೆ ವಿಡಿಯೋ ರೆಕಾರ್ಡ್ ಮಾಡುವುದಕ್ಕಾಗಿ ಇಟ್ಟಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟನೆ ಮಾಡಲು ಮುಂದಾಗಿದ್ದಾನೆ. ಅದರಂತೆ ಆತ ತನ್ನ ಕತ್ತಿಗೆ ನೇಣು ಕುಣಿಕೆ ಹಾಕಿಕೊಂಡಿದ್ದು, ವೀಡಿಯೋ ಚಿತ್ರೀಕರಣ ವೇಳೆ ಇದು ಬಿಗಿಯಾಗಿದ್ದರಿಂದ ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದಾನೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಯಾರ ಗಮನಕ್ಕೂ ಇದು ಬಂದಿಲ್ಲ. ಮುಂಜಾನೆ ಬೆಳಗ್ಗೆ ಅಜಯ್ ಕುಟುಂಬದವರು ಹೋಗಿ ನೋಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ಆದರೆ ಅಜಯ್ ತಾಯಿ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಜಯ್ ದೇಹವನ್ನು ವಶಕ್ಕೆ ಪಡೆದು, ಆತನ ಮೊಬೈಲ್ ಫೋನ್‌ಅನ್ನು ಸೀಜ್ ಮಾಡಿದ್ದಾರೆ. ಅಜಯ್ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೋ ಅಥವಾ ಈ ಸಾವಿನ ಹಿಂದೆ ಏನಾದರೂ ಪಿತೂರಿ ಇದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

రీల్స్ మోజులో ఉరేసుకుని ప్రాణాలు కోల్పోయిన యువకుడు

వరంగల్ – నర్సంపేటలో కందకట్ల అజయ్(23) అనే యువకుడి‌కి రీల్స్ చేసే అలవాటు ఉంది.

ఉరి వేసుకుంటూ సెల్ ఫోన్లో వీడియో తీసుకోవాలి అనుకొని .. ఫ్రిజ్ మీద సెల్ ఫోన్ పెట్టి.. దూలానికి ఉరి వేసుకుంటున్న సమయంలో ఒక్కసారిగా మెడకు తాడు… pic.twitter.com/PVZahKhyot

— Telugu Scribe (@TeluguScribe) June 20, 2024

ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…

ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್ 1: ಟಾಪ್ 10 ಪಟ್ಟಿಯಲ್ಲಿ ದಕ್ಷಿಣ ಭಾರತದ ನಟಿಯರೇ ಇಲ್ಲ!

ಮಲಗುವಾಗ ಗಂಡಾಗಿದ್ದ, ಎದ್ದಾಗ ಹೆಣ್ಣಾಗಿದ್ದ: ಅಚ್ಚರಿ ಎನ್ನಿಸಿದ್ರೂ ಇದು ಸತ್ಯ

80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು!

TAGGED:Instagram influencer dies after accidentally tripping while making reels
Share This Article
Facebook Twitter Copy Link Print
Previous Article ಮಲಗುವಾಗ ಗಂಡಾಗಿದ್ದ, ಎದ್ದಾಗ ಹೆಣ್ಣಾಗಿದ್ದ: ಅಚ್ಚರಿ ಎನ್ನಿಸಿದ್ರೂ ಇದು ಸತ್ಯ
Next Article ಬಾತ್ ರೂಮ್ನಲ್ಲಿ ಫೋಟೋ ಪೋಸ್ ಕೊಟ್ಟ ಶ್ರೀಲೀಲಾ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?