Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಅಂಕಣ ಬರಹ > Political analysis | ಚಕ್ರವ್ಯೂಹದಲ್ಲಿ ವಿಜಯೇಂದ್ರ, ಮುಂದೇನು? ಇನ್ನೆಷ್ಟು ದಿನ BJP ಡ್ರಾಮಾ?
ಅಂಕಣ ಬರಹಕರ್ನಾಟಕಪ್ರಮುಖ

Political analysis | ಚಕ್ರವ್ಯೂಹದಲ್ಲಿ ವಿಜಯೇಂದ್ರ, ಮುಂದೇನು? ಇನ್ನೆಷ್ಟು ದಿನ BJP ಡ್ರಾಮಾ?

Share
2 Min Read
SHARE

newsics.com

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಶನಿ ಕಾಟ ಆರಂಭವಾದಂತಿದೆ. ದಿನ ಬೆಳಗಾದರೆ ಅವರ ರಾಜಕೀಯ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರೀರಾಮುಲು ವಾಗ್ದಾಳಿ ಬಳಿಕ ವಿಜಯೇಂದ್ರ ವಿರುದ್ಧ ಹೊಸ ಬಾಣ ಪ್ರಯೋಗವಾಗಿದೆ.

ಸಂಸತ್ ಸದಸ್ಯ ಹಾಗೂ ಮಾಜಿ ಆರೋಗ್ಯ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಕಾರ್ಯವೈಖರಿ ವಿರುದ್ಧ ಸುಧಾಕರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯ ಸಮಾಧಿ ಮಾಡಲು ವಿಜಯೇಂದ್ರ
ಯತ್ನಿಸುತ್ತಿದ್ದಾರೆ ಎಂದು ಸುಧಾಕರ್ ನೇರ ಆರೋಪ ಮಾಡಿದ್ದಾರೆ.
ವಿಜಯೇಂದ್ರ ಯಾಕೆ ಎಲ್ಲರ ಟಾರ್ಗೆಟ್?
——————–

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಎಲ್ಲ ನಾಯಕರು ಕೆಂಡಕಾರುತ್ತಿದ್ದಾರೆ ಎಂಬುದು ಕುತೂಹಲದ ವಿಷಯ. ವಿಜಯೇಂದ್ರ ರಾಜಕೀಯ ಮನೆತನದ ಸದಸ್ಯ. ಜತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ.

ವೀರಶೈವ ಜನಾಂಗದ ಪ್ರತಿನಿಧಿ. ರಾಜ್ಯದ ಪ್ರಮುಖ ಜನಸಮುದಾಯಗಳಲ್ಲಿ ವೀರಶೈವ ಸಮುದಾಯ ಒಂದಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಬಿಜೆಪಿ ವಿರೋಧ ಪಕ್ಷವಾಗಿದೆ. ಅಧಿಕಾರದಿಂದ ವಂಚಿತವಾಗಿದೆ. ಆದರೂ ವಿಜಯೇಂದ್ರ ನಾಯಕತ್ನಕ್ಕೆ ಯಾಕೆ ಅಪಸ್ವರ
ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ವಿಜಯೇಂದ್ರ ಅವರ ವಯಸ್ಸು ಚಿಕ್ಕದು. ಸಕ್ರಿಯ ರಾಜಕಾರಣ ನಡೆಸಲು ಅವರಿಗೆ ದೀರ್ಘಾವಧಿ ಅವಕಾಶ ಇದೆ. 2028ರ ಚುನಾವಣೆ ಇಲ್ಲಿ ಪ್ರಮುಖ ವಿಷಯವಾಗಿದೆ.
ವಿಜಯೇಂದ್ರ ನಾಯಕತ್ವಕ್ಕೆ ಸಡ್ಡು ಹೊಡೆಯದಿದ್ದರೆ ಅವರ ಸ್ಥಾನ ಇನ್ನಷ್ಟು ಬಲವಾಗಲಿದೆ. ಸಹಜವಾಗಿ ಅವರು ಮುಂದಿನ ಸಿಎಂ ಅಭ್ಯರ್ಥಿ ಆಗುತ್ತಾರೆ ಎಂಬ ಆತಂಕ ಬಿಜೆಪಿ ಹಿರಿಯರದ್ದಾಗಿದೆ. ಇದಕ್ಕಾಗಿ ದೊರೆತಿರುವ ಎಲ್ಲ ಅವಕಾಶ ಬಳಸಿಕೊಳ್ಳುತ್ತಿದ್ದಾರೆ.

ಯತ್ನಾಳ್ ಮಗ್ಗುಲ ಮುಳ್ಳು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯೇಂದ್ರ ನಾಯಕತ್ವಕ್ಕೆ ಬಹಿರಂಗ ಸಡ್ಡು ಹೊಡೆದಿದ್ದಾರೆ. ವಿಜಯೇಂದ್ರ ಬಚ್ಚಾ ಎಂದು ಮೂದಲಿಸಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಅವರ ಜತೆ ಕೈ ಜೋಡಿಸಿದ್ದಾರೆ.

ಇದೀಗ ಶ್ರೀರಾಮುಲು ಅವರನ್ನು ಸೆಳೆಯಲು ಯತ್ನಾಳ್ ಬಣ ಪ್ರಯತ್ನ ನಡೆಸುತ್ತಿದೆ. ದಿನದಿಂದ ದಿನಕ್ಕೆ ಯತ್ನಾಳ್ ಬಣ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಇದು ವಿಜಯೇಂದ್ರ ಬಣದ ಚಿಂತೆಗೆ ಕಾರಣವಾಗಿದೆ.

ಉರಿವ ಬೆಂಕಿಗೆ ತುಪ್ಪ

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಇದರ ಮಧ್ಯೆ ಶ್ರೀರಾಮುಲು ಜನಾರ್ದನ ರೆಡ್ಡಿ ಭಿನ್ನಮತ ಸ್ಫೋಟಗೊಂಡಿದೆ. ಶ್ರೀರಾಮುಲು ವಿಜಯೇಂದ್ರ ಬಿಜೆಪಿ ಸಭೆಯಲ್ಲಿ ನನ್ನ ಪರ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.

ದಿನದಿಂದ ದಿನಕ್ಕೆ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಫೆಬ್ರವರಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಲ್ಲಿವರೆಗೆ ಬಿಜೆಪಿ ನಾಟಕ ಎಂದಿನಂತೆ ಮುಂದುವರಿಯಲಿದೆ.

Tiger Urine ಹುಲಿಯ ಮೂತ್ರಕ್ಕೆ ಭಾರೀ ಡಿಮ್ಯಾಂಡ್: ಸಂಚಲನ ಮೂಡಿಸಿದ ಹೊಸ ಬ್ಯುಸಿನೆಸ್

TAGGED:bjp state president B Y Vijayendra in the labyrinthwhat's next?
Share This Article
Facebook Twitter Copy Link Print
Previous Article Kumbh Mela ಕುಂಭಮೇಳ ಕಾಲ್ತುಳಿತ: ರಾಜ್ಯದ ನಾಲ್ವರು ಸೇರಿ 30 ಜನ ಸಾವು
Next Article cardica arrest: ಅಂಜನಾದ್ರಿ ಬೆಟ್ಟ ಹತ್ತುವಾಗಲೇ 17 ವರ್ಷದ ಯುವಕ ಹೃದಯಸ್ತಂಭನದಿಂದ ಸಾವು

Popular Posts

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read

You Might Also Like

ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read
ಕರ್ನಾಟಕಪ್ರಮುಖ

Crime news ಆಸ್ತಿ ಕೊಡದ ತಂದೆಯನ್ನು‌ ಕೊಂ*ದು ತಾನೂ ಜೀವ ಕಳೆದುಕೊಂಡ ಮಗ!

1 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?