newsics.com
ಮುಂಬೈ : ಸೈಫ್ ಅಲಿ ಖಾನ್ ಅವರಿಗೆ ಜನವರಿ 16ರಂದು ಚೂರಿ ಇರಿತ ಆಗಿತ್ತು. ಮಧ್ಯರಾತ್ರಿಯಲ್ಲಿ ಅವರಿಗೆ ಓರ್ವ ಆಟೋ ಚಾಲಕನಿಂದ ಸಹಾಯ ಸಿಕ್ಕಿತ್ತು. ಭಜನ್ ಸಿಂಗ್ ರಾಣ ಎಂಬ ಆ ಆಟೋ ಚಾಲಕನಿಗೆ ಈಗ ಎಲ್ಲರಿಂದ ಪ್ರಶಂಸೆಯ ಸುರಿಮಳೆ ಆಗುತ್ತಿವೆ.
ಗಾಯಕ ಮಿಕಾ ಸಿಂಗ್ ಅವರು ಈ ಬಗ್ಗೆ ತಮ್ಮಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ಭಾರತದ ಅಚ್ಚುಮೆಚ್ಚಿನ ಸೂಪರ್ ಸ್ಟಾರ್ ನಟನ ಜೀವ ಉಳಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಕನಿಷ್ಠ 11 ಲಕ್ಷ ರೂಪಾಯಿ ಬಹುಮಾನವಾದರೂ ಸಿಗಬೇಕು. ಅವರ ಧೈರ್ಯದ ಕೆಲಸ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಸಾಧ್ಯವಾದರೆ ಅವರನ್ನು ಸಂಪರ್ಕಿಸುವುದು ಹೇಗೆ ಎಂಬ ಮಾಹಿತಿಯನ್ನು ನನ್ನ ಬಳಿ ಹಂಚಿಕೊಳ್ಳಿ. ಮೆಚ್ಚುಗೆಯ ರೂಪದಲ್ಲಿ ನಾನು ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲು ಬಯಸುತ್ತೇನೆ’ ಎಂದು ಮಿಕಾ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.
ಸೈಫ್ಗೆ ಚಾಕು ಇರಿತಕ್ಕೋಳಗಾಗಿ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಷ್ಟ ಆಯಿತು. ಮನೆ ಕೆಲಸದ ಮಹಿಳೆಯು ಮಧ್ಯ ರಸ್ತೆಗೆ ಬಂದು ಆಟೋ ಆಟೋ ಎಂದು ಕೂಗಿದರು. ಆಗ ಆಪದ್ಭಾಂದವನಂತೆ ಬಂದಿದ್ದು ಇದೇ ಆಟೋ ಚಾಲಕ ಭಜನ್ ಸಿಂಗ್ ರಾಣ.