newsics.com
https://www.instagram.com/reel/DE9lk1Qp4j3/?igsh=MTV1ZXVmYTBpNDljdA==
ಹೌದು, ವೈಟ್ ಕಲರ್ ಬಿಕಿನಿ ಧರಿಸಿರುವ ನಿವೇದಿತಾ ಗೌಡ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಹೊಸ ರೀಲ್ಸ್ ಮೂಲಕ ನಿವಿ ಗೊಂಬೆ ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡ್ತಿದ್ದಾರೆ. ಪಡ್ಡೆ ಹುಡುಗರ ನಿದ್ದೆ ಕದ್ದ ನಿವೇದಿತಾ ಗೌಡ ರೀಲ್ಸ್ಗೆ ಲೈಕ್ಗಳ ಸುರಿಮಳೆ ಆಗಿದೆ. ಏನಮ್ಮ ನಿನ್ನ ಅವತಾರ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
ನಿವೇದಿತಾ ಗೌಡ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರೀಲ್ಸ್ನಲ್ಲಿ ವೈಟ್ ಕಲರ್ ಬಿಕಿನಿ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ನಿವೇದಿತಾ ರೀಲ್ಸ್ನಲ್ಲಿ ಸೊಂಟ ಕುಣಿಸೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ 4 ಗಂಟೆಯಲ್ಲೇ 60 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಕಮೆಂಟ್ಸ್ಗಳ ಸುರಿಮಳೆಯಾಗ್ತಿದೆ.
ರ‍್ಯಾಪರ್ ಚಂದನ್ ಶೆಟ್ಟಿ ಜತೆ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ಜೋಡಿ ಫೇಮಸ್ ಆಗಿದ್ದೇ ರೀಲ್ಸ್ ನಿಂದ. ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.