newsics.com
21 ವರ್ಷದ ಯುವತಿಯೊಬ್ಬಳು 57 ವರ್ಷದ ಸಿವಿಲ್ ಕಂಟ್ರಾಕ್ಟರ್ರನ್ನು ಹನಿಟ್ರ್ಯಾಪ್ಗೆ ಬಳಸಿ ಹಣ ಮತ್ತು ಚಿನ್ನಾಭರಣಗಳನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸದ್ಯ, ನಕಲಿ ಪೊಲೀಸರ ತಂಡದೊಂದಿಗೆ ಸೇರಿ ಈ ಕೃತ್ಯ ಎಸಗಿದ ಯುವತಿಯನ್ನು 21 ದಿನಗಳ ಬಳಿಕ ಬಂಧಿಸಲಾಗಿದೆ.
ಹೌದು, 21 ವರ್ಷದ ಬ್ಯೂಟಿ ಸಿಕ್ಕ ಖುಷಿಗೆ ಹನಿಟ್ರ್ಯಾಪ್ಗೆ ಒಳಗಾಗಿದ್ದ 57 ವರ್ಷದ ಅಂಕಲ್ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನೂ ಕಳೆದುಕೊಂಡಿದ್ದ. ಇನ್ನು ಪ್ರಕರಣದಲ್ಲಿ ನಕಲಿ ಪೊಲೀಸರ ವೇಷದಲ್ಲಿದ್ದ ಎಲ್ಲರನ್ನೂ ಅರೆಸ್ಟ್ ಮಾಡಲಾಗಿತ್ತು. ಆದ್ರೆ 21 ವರ್ಷದ ಯುವತಿ ಮಾತ್ರ ನಾಪತ್ತೆಯಾಗಿದ್ದಳು. ಸದ್ಯ ಈ ಪ್ರಕರಣದ ನಡೆದ 21 ದಿನಗಳ ಬಳಿಕ ಯುವತಿಯನ್ನು ಅರೆಸ್ಟ್ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ನಯನಾಳನ್ನ ವಶಕ್ಕೆ ಪಡೆದು ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಯನಾಳಿಂದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ.ಸದ್ಯ ಒಬ್ಬರಿಗೆ ಮಾತ್ರ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.
ಯಲಹಂಕದಲ್ಲಿ ತಲೆಮರೆಸಿಕೊಂಡಿದ್ದ ನಯನಾಳನ್ನು ಪೊಲಸರು ಬಂಧಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸ್ನೇಹಿತರ ಮನೆಯಲ್ಲಿ ವಾಸವಾಗಿದ್ದಳು. ಮೊಬೈಲ್ ಸಿಡಿಆರ್ ತೆಗೆದು ಲೊಕೇಷನ್ ಟ್ರಸ್ ಮಾಡಿದ್ದ ಪೊಲೀಸರಿಗೆ ಈಕೆಯ ಮಾಹಿತಿ ಸಿಕ್ಕಿತ್ತು. ಇನ್ನು ನಯನಾಗೆ ಅಂಕಲ್ ಆಗಾಗ ಐದು ಹತ್ತು ಸಾವಿರ ಹಣವನ್ನ ಕೊಡುತ್ತಿದ್ದ ಅನ್ನೋ ಮಾಹಿತಿ ಕೂಡ ಬಹಿರಂಗವಾಗಿದೆ.