newsics.com
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಸೆರೆಯಾದ ವಿಚಿತ್ರ ಘಟನೆ ನಡೆದಿದೆ.
ಗ್ರಾಮದ ಹನುಮಯ್ಯ ಎಂಬುವರು ಬೋನಿನಲ್ಲಿ ಸೆರೆಯಾಗಿದ್ದ ವ್ಯಕ್ತಿ. ಈ ಭಾಗದಲ್ಲಿ ಜಾನುವಾರುಗಳ ಮೇಲೆ ಚಿರತೆಯೊಂದು ನಿರಂತರ ದಾಳಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮಹಾದೇವಸ್ವಾಮಿ ಎಂಬುವರ ಜಮೀನಿನಲ್ಲಿ ‘ತುಮಕೂರು ಮಾದರಿ’ ಬೋನನ್ನು ಅಳವಡಿಸಿ ಕರು ಕಟ್ಟಿದ್ದರು.
ಕರು ನೋಡಲು ಬೋನಿನ ಒಳಕ್ಕೆ ಹನುಮಯ್ಯ ಹೋದಾಗ ಬಾಗಿಲು ಬಂದ್ ಆಗಿ ಸುಮಾರು 6 ತಾಸು ಅದರೊಳಗೆ ಉಳಿದಿದ್ದಾರೆ. ಸ್ಥಳೀಯ ರೈತರೊಬ್ಬರು ಬೋನಿನಲ್ಲಿ ವ್ಯಕ್ತಿ ಸೆರೆಯಾಗಿದ್ದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ್ದಾರೆ.
Prajwal Revanna case ಅಶ್ಲೀಲಕ್ಕೂ ಮಿತಿಯಿರಬೇಕು, ಇದು ಎಲ್ಲವನ್ನೂ ಮೀರಿದೆ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಚಾಟಿ
Air hostess fired ತರಬೇತಿ ಮುಗಿಸಿದ ಖುಷಿಗೆ ವಿಮಾನದಲ್ಲಿ ವಿಡಿಯೋ ಮಾಡಿದ ಗಗನಸಖಿ ವಜಾ! ವೈರಲ್ ವಿಡಿಯೊ ನೋಡಿ
Samatha video viral ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ಹಾಟ್ ಬ್ಯೂಟಿ ಸಮಂತಾ! ವಿಡಿಯೋ ನೋಡಿ