newsics.com
ಅಮರಾವತಿ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರದ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಈ ಉಡಾವಣಾ ಕೇಂದ್ರ ಇಸ್ರೋದ ಎನ್‌ಜಿಎಲ್‌ವಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಮೂರನೇ ಉಡಾವಣಾ ಕೇಂದ್ರವು ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪನೆಗೆ ಹಾಗೂ 2024ರ ವೇಳೆಗೆ ಮಾನವನನ್ನು ಚಂದ್ರನ ಬಳಿ ಕಳುಹಿಸುವ ಯೋಜನೆಗೆ ಇದು ಸಹಕಾರಿಯಾಗಲಿದೆ. ಉಡಾವಣಾ ಕೇಂದ್ರವನ್ನು 4 ವರ್ಷಗಳ ಅವಧಿಯಲ್ಲಿ 3,984.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ನಿರೀಕ್ಷೆಯಿದ್ದು, ಇದು ಉಡಾವಣಾ ಕೇಂದ್ರದ ಸ್ಥಾಪನೆ ಮತ್ತು ವಾಹನ ಜೋಡಣೆ, ಉಪಗ್ರಹ ತಯಾರಿಕೆ ಮತ್ತು ಇಂಧನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.