newsics.com
ತೆಲಂಗಾಣ: ತೆಲಂಗಾಣದಲ್ಲಿ ಮಕರ ಸಂಕ್ರಾಂತಿಯ ಸಡಗರ ಮೇಳೈಸಲಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣ ಶಿಕ್ಷಣ ಇಲಾಖೆ 6 ದಿನಗಳ ಕಾಲ ಶಾಲಾ ರಜೆ ಘೋಷಣೆ ಮಾಡಿದೆ.
ಜನವರಿ 11ರಿಂದ 16ರವರೆಗೆ ರಾಜ್ಯದ ಎಲ್ಲಾ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜನವರಿ 17ಕ್ಕೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಪುನರಾರಂಭ ಮಾಡುವಂತೆ ಆದೇಶಿಸಲಾಗಿದೆ.
ತಮಿಳುನಾಡು ಸರ್ಕಾರ ಕೂಡ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ 5 ದಿನಗಳ ಶಾಲಾ ರಜೆ ಘೋಷಣೆ ಮಾಡಿದೆ. ಜನವರಿ 14ರಿಂದ 17ರವರೆಗೆ ಶಾಲಾ ಮಕ್ಕಳು ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಮಕರ ಸಂಕ್ರಾಂತಿ ಹಬ್ಬವನ್ನು ತೆಲಂಗಾಣದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಲಾ ಮಕ್ಕಳು ಸಂಕ್ರಾಂತಿ ಹಬ್ಬಕ್ಕೆ ಮನೆಯವರ ಜೊತೆ ಇರಲಿ. ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿ ಎಂದು ಆಶಿಸಲಾಗಿದೆ.