newsics.com
ನವದೆಹಲಿ : ಜಾಕೋಬ್ ಆಂಡ್ ಕೋ ಕಂಪೆನಿ ಶ್ರೀರಾಮ, ಆಂಜನೇಯ ಮತ್ತು ರಾಮ ಮಂದಿರದ ವಿನ್ಯಾಸವಿರುವ ಈ ವಿಶಿಷ್ಟ ವಾಚ್ ತಯಾರಿಸಿದೆ. ಈ ವಿಶಿಷ್ಟ ಹಾಗೇನೇ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ತನ್ನ ವಿಶಿಷ್ಟ ವಿನ್ಯಾಸಗಳಿಗೆ ಹೆಸರುವಾಸಿಯಾದ ವಾಚ್ ಬ್ರಾಂಡ್ ಜಾಕೋಬ್ & ಕೋ ಈ ವಿಶೇಷ ಆವೃತ್ತಿಯ ವಾಚ್ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸುಮಾರು 49 ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಾಗಲೇ 35 ವಾಚ್ ಮಾರಾಟವಾಗಿದೆ.
ಜಾಕೋಬ್ & ಕೋ ಭಾರತೀಯ ಮೂಲಕ ವಾಚ್ ಕಂಪೆನಿಯಾದ ಎಥೋಸ್ ಸಹಯೋಗದೊಂದಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಈ ವಿಶೇಷ ವಾಚ್ ತಯಾರಿಸಿದೆ. ಈ ವಾಚ್‌ನಲ್ಲಿ ಶ್ರೀರಾಮ, ಆಂಜನೇಯ ಮತ್ತು ರಾಮಮಂದಿರ ವಿಶೇಷ ವಿನ್ಯಾಸವಿದೆ. ಇದು 44 ಎಂಎಂ ರೋಸ್ ಗೋಲ್ಡ್‌ನಿಂದ ಆವೃತವಾಗಿದೆ. ಈ ವಿಶೇಷ ಆವೃತ್ತಿಯ ವಾಚ್‌ನ ಬೆಲೆ ಬರೋಬ್ಬರಿ 34 ಲಕ್ಷ ರೂಪಾಯಿಗಳು.