newsics.com
ನವದೆಹಲಿ : ಜನವರಿ 13 ರಿಂದ ದೆಹಲಿಯಲ್ಲಿ ನಡೆಯಲಿರುವ ಮೊದಲ ಖೋ-ಖೋ ವಿಶ್ವಕಪ್‌ನಲ್ಲಿ 39 ತಂಡಗಳು ಪಾಲ್ಗೊಳ್ಳಲಿವೆ. ಪಾಕಿಸ್ತಾನ ತಂಡ ವೀಸಾ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದೆ.
ಭಾರತದ ಮೊದಲ ಪಂದ್ಯ ನೇಪಾಳ ವಿರುದ್ಧ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಜನವರಿ 19 ರಂದು ನಡೆಯಲಿದೆ.
ಪುರುಷ ಹಾಗೂ ಮಹಿಳಾ ತಂಡಗಳು ಸೇರಿದಂತೆ ಒಟ್ಟು 39 ತಂಡಗಳು ಭಾಗವಹಿಸಲಿವೆ. ವಾಸ್ತವವಾಗಿ ಈ ಮೊದಲು ಈ ಪಂದ್ಯಾವಳಿಯಲ್ಲಿ 40 ತಂಡಗಳು ಭಾಗವಹಿಸಬೇಕಿತ್ತು. ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನ ತಂಡ ವೀಸಾ ಸಮಸ್ಯೆಯಿಂದಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಟೂರ್ನಿಯ ಮೊದಲ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಪಾಕ್ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಬೇರೊಂದು ತಂಡದ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.