newsics.com
ಬೆಳಗಾವಿ: ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಹಸುಗೂಸು, ಬಾಣಂತಿ ಸಮೇತ ಕುಟುಂಬವನ್ನು ಖಾಸಗಿ ಫೈನಾನ್ಸ್ ಕಂಪನಿಯೊಂದು ಪೊಲೀಸರ ಮೂಲಕ ಹೊರ ಹಾಕಿದ ಅಮಾನವೀಯ ಘಟನೆ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ರೈತ ರೈತ ಸೈದಪ್ಪ ಶಂಕ್ರಪ್ಪ ಗದ್ದಾಡಿ ಅವರು ಹೈನುಗಾರಿಕೆಗಾಗಿ ಐದು ಲಕ್ಷ ಸಾಲ ಪಡೆದಿದ್ದರು. ಎರಡೂವರೆ ವರ್ಷದ ಹಿಂದೆ ಚಿಕ್ಕೋಡಿ ಶಾಖೆಯಲ್ಲಿ ಸಾಲ ಪಡೆದಿದ್ದರು. ಸಾಲ ಪಡೆದು ತೆಗೆದುಕೊಂಡ ಎರಡು ಎಮ್ಮೆಗಳು ಕೂಡ ಸಾವನ್ನಪ್ಪಿವೆ. ಇಷ್ಟಾದರೂ ಈವರೆಗೂ ಪ್ರತಿ ತಿಂಗಳು 14,390 ರೂ.ದಂತೆ 27 ಕಂತುಗಳನ್ನು ರೈತ ಕಟ್ಟಿದ್ದರು. ಮಗಳ ಹೆರಿಗೆಗೆ 85 ಸಾವಿರ ಖರ್ಚು ಮಾಡಿದ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಕಂತು ಕಟ್ಟಿರಲಿಲ್ಲ. ಆದರೆ ಈವರೆಗೂ ಕಟ್ಟಿದ್ದ ಹಣ ಕಂಪನಿಗೆ ಮುಟ್ಟಿಲ್ಲ ಎಂದು ಐದು ಲಕ್ಷ ಹಣ ಕಟ್ಟುವಂತೆ ಕಂಪನಿ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ. ವಕೀಲರ ಮೂಲಕ ಕಂಪನಿಯಿಂದ ನೋಟಿಸ್ ನೀಡಿ ಮನೆ ಸೀಜ್ ಮಾಡಿದ್ದಾರೆ.
ಬಾಣಂತಿ ಹಾಗೂ ಮೂರು ಮಕ್ಕಳ ಸಮೇತ ಏಳು ಜನ ಮನೆಯ ಹೊರಕ್ಕೆ ಬಂದಿದ್ದಾರೆ. ಸಾಲ ಮರು ಪಾವತಿ ಮಾಡಿಲ್ಲ ಅಂತ ಮನೆಯನ್ನು ಸಿಬ್ಬಂದಿ ಸೀಜ್ ಮಾಡಿದ್ದಾರೆ.