Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actor Darshan ದರ್ಶನ್ ಬೆಂಬಿಡದ ಬೆನ್ನು ನೋವು, ಸಂಕ್ರಾಂತಿ ಬಳಿಕ ಆಪರೇಷನ್, ಡೆವಿಲ್ ಸಿನಿಮಾ ಯಾವಾಗ?
ಕರ್ನಾಟಕಪ್ರಮುಖಮನರಂಜನೆ

Actor Darshan ದರ್ಶನ್ ಬೆಂಬಿಡದ ಬೆನ್ನು ನೋವು, ಸಂಕ್ರಾಂತಿ ಬಳಿಕ ಆಪರೇಷನ್, ಡೆವಿಲ್ ಸಿನಿಮಾ ಯಾವಾಗ?

Share
1 Min Read
SHARE

newsics.com
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್‌ಗೆ ಅನಾರೋಗ್ಯ ಕಾಡುತ್ತಲೇ ಇದೆ. ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಡಿಸ್ಕ್‌ನ ಸಮಸ್ಯೆಯಿಂದಾಗಿ ಈ ರೀತಿ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಈಗ ದರ್ಶನ್ ಅವರಿಗೆ ಆಪರೇಷನ್ ಮಾಡುವುದು ಅನಿವಾರ್ಯವಾಗಿದೆ.

ಬೆಂಬಿಡದೆ ಕಾಡುತ್ತಿರುವ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ದರ್ಶನ್ ಅವರು ಆಪರೇಷನ್‌ಗೆ ಒಪ್ಪಿಗೆ ಕೊಟ್ಟಿದ್ದಾರೆ.

ದರ್ಶನ್ ಅವರು ಐಷಾರಾಮಿ ಜೀವನ ನಡೆಸಿದವರು. ಈ ಕಾರಣಕ್ಕೆ ಜೈಲು ವಾಸ ಅವರಿಗೆ ಕಷ್ಟ ಆಯಿತು. ಜೈಲಿನಲ್ಲಿ ಕೂರಲು, ಮಲಗಲು ಅವರಿಗೆ ಬೇಕಾದ ರೀತಿಯ ವ್ಯವಸ್ಥೆ ತಕ್ಷಣಕ್ಕೆ ಸಿಗದೆ ಬೆನ್ನು ನೋವು ಆರಂಭವಾಯಿತು. ದರ್ಶನ್ ಅವರು ಆಪರೇಷನ್ ನೀಡಿ ಮಧ್ಯಂತರ ಜಾಮೀನು ಪಡೆದರು. ಇಷ್ಟು ದಿನ ಅವರು ಫಿಸಿಯೋಥೆರಪಿ ಮೂಲಕವೇ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಂಕ್ರಾತಿ ವೇಳೆಗೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರಿಗೆ ವೈದ್ಯ ಅಜಯ್ ಹೆಗಡೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ಆಪರೇಷನ್ ನಡೆದ ಒಂದುವರೆ ತಿಂಗಳವರೆಗೂ ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎನ್ನಲಾಗಿದೆ. ಅಂದರೆ ಅವರು ‘ಡೆವಿಲ್’ ಸಿನಿಮಾದ ಸಾಮಾನ್ಯ ದೃಶ್ಯಗಳ ಶೂಟ್ನಲ್ಲಿ ಭಾಗಿ ಆಗಬಹುದು. ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರೀಕರಣ ಆರಂಭ ಆದ ಬಳಿಕ ಮತ್ತೆ ಬೆನ್ನು ನೋವು ಹೆಚ್ಚಿದರೆ ಸಿನಿಮಾ ಕೆಲಸ ವಿಳಂಬ ಆಗುತ್ತದೆ. ಈ ಕಾರಣದಿಂದಲೇ ಸರ್ಜರಿ ಬಳಿಕವೇ ಶೂಟಿಂಗ್‌ಗೆ ತೆರಳಲು ಅವರು ನಿರ್ಧರಿಸಿದ್ದಾರೆ.
ಡೆವಿಲ್’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಶೂಟಿಂಗ್ ಪೂರ್ತಿಗೊಳಿಸಿ ಸಿನಿಮಾವನ್ನು ಈ ವರ್ಷವೇ ರಿಲೀಸ್ ಮಾಡುವ ಆಲೋಚನೆ ಚಿತ್ರ ತಂಡಕ್ಕೆ ಇದೆ.

OYO rooms ಅವಿವಾಹಿತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಓಯೋ

Cancer risk from alcohol ‌ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?

TAGGED:Darshan suffering back painsurgery after Sankrantiwhen is the movie Devil?
Share This Article
Facebook Twitter Copy Link Print
Previous Article OYO rooms ಅವಿವಾಹಿತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಓಯೋ
Next Article Edible oil ಅಡುಗೆ ಎಣ್ಣೆ ದರ ಭಾರೀ ಇಳಿಕೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?