newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಶುಕ್ಲ ಪಕ್ಷ ಪಂಚಮಿ
04-1-2025, ಶನಿವಾರ
* ಮಡಿವಾಳ ಸೋಮೇಶ್ವರ ರಥೋತ್ಸವ
* ವಿಶ್ವ ಬ್ರೈಲ್ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 04/01/2025
ತಿಂಗಳು – ಜನವರಿ
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ಪಂಚಮಿ 22:00:28
ಪಕ್ಷ – ಶುಕ್ಲ
ನಕ್ಷತ್ರ – ಶತಭಿಷಾ 21:22:28
ಯೋಗ – ಸಿದ್ಧಿ 10:06:54
ಕರಣ – ಭವ 10:50:45
ಕರಣ – ಬಾಳವ 22:00:28
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಕುಂಭ
ಸೂರ್ಯರಾಶಿ ಧನು
ಹೇಮಂತ ಋತು
ಸೂರ್ಯೋದಯ 06:44:10
ಸೂರ್ಯಾಸ್ತ 18:05:15
ಹಗಲಿನ ಅವಧಿ 11:21:04
ರಾತ್ರಿಯ ಅವಧಿ 12:39:15
ಚಂದ್ರೋದಯ 10:13:49
ಚಂದ್ರಾಸ್ತ 22:20:44
ರಾಹು ಕಾಲ 09:34 – 10:59 ಅಶುಭ
ಯಮಘಂಡ ಕಾಲ 13:50 – 15:15 ಅಶುಭ
ಗುಳಿಕ ಕಾಲ 06:44 – 08:09
ಅಭಿಜಿತ್ 12:02 – 12:47 ಶುಭ
ದುರ್ಮುಹೂರ್ತ 08:15 – 09:00 ಅಶುಭ
—-
ಇಂದಿನ ಮಾತು
ಜಗತ್ತಿನಲ್ಲಿ ಆಗ್ಗದ ವಸ್ತುವೆಂದರೆ ಸಲಹೆ.
ಒಬ್ಬರನ್ನು ಕೇಳಿದರೆ ಸಾವಿರ ಜನ ನೀಡುತ್ತಾರೆ.
ದುಬಾರಿ ವಸ್ತುವೆಂದರೆ ಸಹಾಯ. ಸಾವಿರ ಜನರನ್ನು ಕೇಳಿದಾಗ ಒಬ್ಬರು ಸಹಾಯ ಮಾಡುತ್ತಾರೆ.
—-
ಇಂದಿನ ಸುಭಾಷಿತ
ಹಂಸೋ ನ ಭಾತಿ ಬಲಿಭೋಜಕವೃಂದಮಧ್ಯೇ
ಗೋಮಾಯುಮಂಡಲಗತೋ ನ ವಿಭಾತಿ ಸಿಂಹಃ ।
ಜಾತ್ಯೋ ನ ಭಾತಿ ತುರಗಃ ಖರಯೂಥಮಧ್ಯೇ
ವಿದ್ವಾನ್ ನ ಭಾತಿ ಪುರುಷೇಷು ನಿರಕ್ಷರೇಷು ।।
(ಸಮಯೋಚಿತ ಪದ್ಯಮಾಲಿಕಾ)
ಕಾಗೆಗಳ ಗುಂಪಿನಲ್ಲಿ ಹಂಸವೂ, ನರಿಗಳ ನಡುವೆ ಸಿಂಹವೂ, ಕತ್ತೆಗಳ ಕೂಟದಲ್ಲಿ ಒಳ್ಳೆಯ ಜಾತಿಯ ಕುದುರೆಯೂ ಶೋಭಿಸವು. ಅಂತೆಯೇ ನಿರಕ್ಷರರ ನಡುವೆ ವಿದ್ವಾಂಸನೂ ಶೋಭಿಸಲಾರನು.
🌷🌺🙏🌺🌷