newsics.com
ಚೀನಾ : ಕೋವಿಡ್ ತವರೂರು ಚೀನಾದಲ್ಲಿ ಮತ್ತೆ ವೈರಸ್ ಆರ್ಭಟ ಶುರುವಾಗಿದೆ. ಹೊಸ ವೈರಸ್ ಹರಡುವಿಕೆಯಿಂದ ಇಡೀ ಜಗತ್ತಿನಲ್ಲಿ ಮತ್ತೆ ನಡುಕ ಹುಟ್ಟಿಸಿದ್ದು, ಈ ಬಾರಿ ಒಂದಲ್ಲ, ಎರಡಲ್ಲ, ಹಲವು ವೈರಸ್ಗಳ ಕಾಟ ಶುರುವಾಗುವ ಭೀತಿ ಎದುರಾಗಿದೆ.
ಕೋವಿಡ್-19 ಮಾತ್ರವಲ್ಲದೇ, ಇನ್ ಪ್ಲೂಯೆಂಜಾ ಎ, HMPV, ಮೈಕೋ ಪ್ಲಾಸ್ಲಾ ನ್ಯೂಮೋನಿಯಾಗಳ ಎಂಬ ಸಾಂಕ್ರಮಿಕ ರೋಗಗಳ ಕಾಟ ಶುರುವಾಗಿದೆ. ಪ್ರಮುಖವಾಗಿ HMPV ಅಂದ್ರೆ ಹ್ಯೂಮನ್ ಮೆಟೋನ್ಯುಮೋ ವೈರಸ್ ಚೀನಾದಲ್ಲಿ ಮಹಾಮಾರಿಯಂತೆ ವ್ಯಾಪಿಸಿದ್ದು, ರೋಗಿಗಳಿಂದ ಆಸ್ಪತ್ರೆಗಳು ಮತ್ತು ಶವಗಾರಗಳು ತುಂಬಿ ತುಳುಕುತ್ತಿವೆ.
. ಹ್ಯೂಮನ್ ಮೆಟನ್ಯುಮೋ ಎಂದು ಕರೆಯಲ್ಪಡರು ಈ ವೈರಸ್, 2001ರಲ್ಲಿ ಮೊಲದ ಬಾರಿಗೆ ಪತ್ತೆ ಮಾಡಲಾಗಿತ್ತು. ಇದ್ರ ಲಕ್ಷಣಗಳು ಏನು ಅಂತ ನೋಡೊದಾದ್ರೇ, ರೋಗಿಗಳಲ್ಲಿ ಜ್ವರ, ಕೋವಿಡ್-19 ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಚಳಿಗಾಲದ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 14 ವರ್ಷದೊಳಗಿನ ಮಕ್ಕಳೇ ಈ ವೈರಸ್ನ ಟಾರ್ಗೆಟ್ ಆಗಿದ್ದು, ಇದರ ಇನ್ ಕ್ಯೂಬೇಷನ್ ಅವಧಿ ಮೂರರಿಂದ ಆರು ದಿನಗಳವರೆಗೆ ಇದೆ. ಆರು ದಿನಗಳಲ್ಲಿ ಸೋಂಕಿನ ಲಕ್ಷಣ ತೀವ್ರವಾಗಿ ಕಾಣಿಕೊಳ್ಳುತ್ತದೆ. ಸದ್ಯ ಚೀನಾದಲ್ಲಿ ರಣಕೇಕೆ ಹಾಕ್ತಿರುವ ಈ ಹೆಚ್ಎಂಪಿವಿ ವೈರಸ್ಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಆ್ಯಂಟಿವೈರಲ್ ಇಲ್ಲದಿರುವುದು ದುರಾದೃಷ್ಟಕರ ಸಂಗತಿ.
ಚೀನಾದಲ್ಲಿ ಜನರು ಕಡ್ಡಯವಾಗಿ ಮಾಸ್ಕರ್ ಧರಿಸಬೇಕು ಮತ್ತು ಕೈಗಳನ್ನು ಆಗಾಗ್ಗೆ ತೋಳೆದುಕೊಳ್ಳಬೇಕು ಎಂಬ ಸೂಚನೆಗಳನ್ನ ಹೊರಡಿಸಲಾಗಿದೆ.