newsics.com
ಬೆಂಗಳೂರು : ಸ್ಯಾಂಡಲ್‌ವುಡ್‌ನ ರೆಬಲ್ ಫ್ಯಾಮಿಲಿಯ ಸೊಸೆ ಅವಿವಾ ಬಿದ್ದಪ್ಪ ಮಗನ ಫೋಟೋ ರಿವೀಲ್ ಮಾಡಿದ್ದಾರೆ. ಈ ಒಂದು ಫೋಟೋಗೆ ಪತಿ ಅಭಿಷೇಕ್ ಅಂಬರೀಶ್ ಕಾಂಪ್ಲಿಮೆಂಟ್ ಮಾಡಿದ್ದಾರೆ.
ಅಭಿಷೇಕ್ ಅಂಬರೀಶ್ ಪತ್ನಿ ಅವಿತಾ ಬಿದ್ದಪ್ಪ ತಮ್ಮ ಮಗನನ್ನ ಡ್ರ್ಯಾಗನ್ ಬಾಯ್ ಅಂತಲೇ ಕರೆದಿದ್ದಾರೆ. ಹಾಗೇನೆ ರೆಬೆಲ್ ಫ್ಯಾಮಿಲಿ ತೋರಿದ ಪ್ರೀತಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಹಾಗೇನೆ ಹೊಸ ವರ್ಷದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ.
ಅವಿತಾ ಬಿದ್ದಪ್ಪ ತಮ್ಮ ಮಗನ ಫೋಟೋ ಶೇರ್ ಮಾಡಿದ್ದಾರೆ. ಆದರೆ, ಈ ಒಂದು ಫೋಟೋದಲ್ಲಿ ಮಗನ ಮುಖವೇನೂ ಕಾಣಿಸೋದಿಲ್ಲ. ಆದರೆ, ಪುಟ್ಟ ಕೈ ಮಾತ್ರ ಕಾಣಿಸುತ್ತದೆ. ಚೂರೇ ಚೂರು ಅನ್ನೋ ಹಾಗೆ ಮುಖವೂ ಕಂಡಂತಾಗುತ್ತದೆ. ಅದು ಬಿಟ್ರೆ, ಜೂನಿಯರ್ ರೆಬಲ್ ಜೋರಾಗಿಯೇ ಇದ್ದಂತೆ ಫೀಲ್ ಆಗುತ್ತದೆ.
ಅವಿತಾ ಬಿದ್ದಪ್ಪ ಹಂಚಿಕೊಂಡ ಮಗನ ಫೋಟೋಗೆ ಕಾಂಪ್ಲಿಮೆಂಟ್ಸ್ ಬಂದಿವೆ. ಜೂನಿಯರ್ ರೆಬಲ್ ಸೂಪರ್ ಅನ್ನೋ ಸಾಲುಗಳನ್ನ ಇಲ್ಲಿ ಬರೆಯಲಾಗಿದೆ. ಇಬ್ಬರಿಗೂ ಅಭಿನಂದನೆಗಳು ಅಂತಲೂ ಅದ್ಯಾರೋ ಕಾಮೆಂಟ್ ಬಾಕ್ಸ್ ಅಲ್ಲಿಯೇ ತಿಳಿಸಿದ್ದಾರೆ.
ಅಭಿಷೇಕ್ ಹಾಗೂ ಅವಿವಾ ಅವರ ಸುಂದರ ಕ್ಷಣದ ಫೋಟೋನೇ ಆಗಿದೆ. ಇವರ ಈ ಎರಡು ಫೋಟೋಳನ್ನ ಅವಿತಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಶೇರ್ ಮಾಡಿದ್ದಾರೆ.
https://www.instagram.com/p/DEMhKLdM9Vs/?igsh=MWg1NTh2MDdibnRqcw==