newsics.com
ಪಾಕಿಸ್ತಾನ : 18 ವರ್ಷ ತಾಯಿ ಜೊತೆಗಿದ್ದ ಈ ಮಗ ಬಹಳ ದೊಡ್ಡ ನಿರ್ಧಾರಕ್ಕೆ ಬಂದಿದ್ದಾನೆ. ಪತಿಯನ್ನು ಕಳೆದುಕೊಂಡಿದ್ದ ತಾಯಿಗೆ ಮರು ಪ್ರೀತಿ, ಹೊಸ ಜೀವನ ಕೊಟ್ಟಿದ್ದಾನೆ. ಅಬ್ದುಲ್ ಅಹಾದ್ ಎಂಬ ಯುವಕ ಪೋಸ್ಟ್ ಮಾಡಿರೋ ಭಾವನಾತ್ಮಕ ವಿಡಿಯೋ ನೆಟ್ಟಿಗರು ಫಿದಾ ಆಗುವಂತೆ ಮಾಡಿದೆ.
ಪಾಕಿಸ್ತಾನದ ಲಾಹೋರ್ನಲ್ಲಿ ಅಬ್ದುಲ್ ಅಹಾದ್ ಕುಟುಂಬ ವಾಸವಿದೆ. ಕಳೆದ 18 ವರ್ಷಗಳಿಂದ ಅಬ್ದುಲ್ ಅಹಾದ್ನ ತಾಯಿ ಪ್ರೀತಿಯಿಂದ ಸಾಕಿದ್ದಾರೆ. ಬದುಕಲ್ಲಿ ಏಕಾಂಗಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು 2ನೇ ಮದುವೆ ಮಾಡಿಸಿ ಶುಭಾಶಯ ಕೋರಿದ್ದಾನೆ.
ಅಬ್ದುಲ್ ಅಹಾದ್ ಅವರು ತಾಯಿಗೆ 2ನೇ ಮದುವೆ ಮಾಡಿಸಿದ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕಿಸ್ತಾನದ ಮೀಡಿಯಾಗಳು ಇದೊಂದು ಮನಮುಟ್ಟುವ ಘಟನೆ ಎಂದು ವರದಿ ಮಾಡಿವೆ.
https://www.instagram.com/reel/DDuKhwGCtp3/?igsh=eWQ1YmNuYnM4NWl2